ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೈಕ್ ಕಳವು ಆರೋಪ: ಹುಣಸೂರಿನ ಓರ್ವ ಬಂಧನ

ಕಾಸರಗೋಡು: ರೈಲು ನಿಲ್ದಾಣದಲ್ಲಿ ಬೈಕ್ ಕಳವುಗೈದ ಪ್ರಕರಣದಲ್ಲಿ ಹುಣಸೂರಿನ ಆರೋಪಿಯೋರ್ವನನ್ನು ಕಾಸರಗೋಡು ಪೊಲೀಸರು ಬಂಧಿಸಿದ್ದಾರೆ.

ಬಂಧಿತನನ್ನು ಹುಣಸೂರಿನ ಕೆ. ಕಾರ್ತಿಕ್ (20) ಎಂದು ಗುರುತಿಸಲಾಗಿದೆ. ಚೆರ್ಕಳಪಾಡಿಯ ಗಣೇಶ್ ಎಂಬವರು ಕಾಸರಗೋಡು ರೈಲು ನಿಲ್ದಾಣದಲ್ಲಿ ಫೆ. 6 ರಂದು ನಿಲ್ಲಿಸಿದ್ದ ಬೈಕ್ ಕಳವಾಗಿತ್ತು. ಈ ಸಂಬಂಧ ಅವರು ಕಾಸರಗೋಡು ಪೊಲೀಸ್‌ಠಾಣೆಗೆ ದೂರು ನೀಡಿದ್ದರು.

ಈ ಹಿನ್ನೆಲೆಯಲ್ಲಿ ತನಿಖೆ‌ ಕೈಗೊಂಡ ಪೊಲೀಸರು ಹುಣಸೂರು ನಿವಾಸಿ‌ ಸದ್ಯ ಕಾಸರಗೋಡಿನಲ್ಲಿ ವಾಸವಿದ್ದ‌ ಕಾರ್ತಿಕ್ನನ್ನು ಬಂಧಿಸಿದ್ದಾರೆ. ಇನ್ನೋರ್ವ ಆರೋಪಿ ಪರಾರಿಯಾಗಿದ್ದಾನೆ ಎಂದು ತಿಳಿದು ಬಂದಿದೆ.

Edited By : Nagaraj Tulugeri
Kshetra Samachara

Kshetra Samachara

12/02/2021 09:21 am

Cinque Terre

7.07 K

Cinque Terre

0

ಸಂಬಂಧಿತ ಸುದ್ದಿ