ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೂಡುಬಿದಿರೆ: ಬಿಲ್ಲವ ಸಮುದಾಯದ ಅವಹೇಳನ; ಆಕ್ರೋಶ, ಠಾಣೆಗೆ ದೂರು

ಮೂಡುಬಿದಿರೆ: ತುಳುನಾಡಿನ ಆರಾಧ್ಯ ದೈವಗಳಾದ ಕೋಟಿ- ಚೆನ್ನಯರ ಬಗ್ಗೆ ಹಾಗೂ ಹಿರಿಯ ರಾಜಕಾರಣಿ, ಬಿಲ್ಲವ ನಾಯಕ ಜನಾರ್ದನ ಪೂಜಾರಿಯವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ಬಿಜೆಪಿ ಮುಖಂಡ ಜಗದೀಶ್ ಅಧಿಕಾರಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಮೂಡುಬಿದಿರೆ ಬಿಲ್ಲವ ಸಂಘದ ವಿವಿಧ ಘಟಕಗಳ ಮುಖಂಡರು ಶುಕ್ರವಾರ ಮೂಡುಬಿದಿರೆ ಪೊಲೀಸರಿಗೆ ದೂರು ನೀಡಿದ್ದಾರೆ.

ತುಳುನಾಡಿನ ವೀರಪುರುಷರಾದ ಕೋಟಿ- ಚೆನ್ನಯರ ಇತಿಹಾಸವನ್ನು ತಿರುಚಿ ಕೀಳಾಗಿ ಮಾತನಾಡಿದ್ದು ಹಾಗೂ ಮಾಜಿ ಕೇಂದ್ರ ಸಚಿವ ಜನಾರ್ದನ ಪೂಜಾರಿಯವರ ಬಗ್ಗೆಯೂ ಅವಹೇಳನಕಾರಿಯಾಗಿ ಮಾತನಾಡಿ ಬಿಲ್ಲವ ಸಮಾಜದವರ ಮನಸ್ಸಿಗೆ ಘಾಸಿ ಉಂಟುಮಾಡಿದ್ದಾರೆ. ಅವರ ಹೇಳಿಕೆಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಬಿಲ್ಲವರ ಬಗ್ಗೆ ಸಮಾಜಕ್ಕೆ ಕೆಟ್ಟ ಸಂದೇಶವನ್ನು ನೀಡಿದಂತಾಗಿದೆ. ಆದ್ದರಿಂದ ಜಗದೀಶ್ ಅಧಿಕಾರಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಪೊಲೀಸರಿಗೆ ನೀಡಿದ ಲಿಖಿತ ದೂರಿನಲ್ಲಿ ಆಗ್ರಹಿಸಲಾಗಿದೆ.

ಬಿಲ್ಲವ ಸಂಘದ ಅಧ್ಯಕ್ಷ ಪಿ.ಕೆ.ರಾಜು ಪೂಜಾರಿ, ಸಂಘದ ಪದಾಧಿಕಾರಿಗಳು, ಬಿಲ್ಲವ ಸಂಘದ ಮಹಿಳಾ ಘಟಕ, ಸೇವಾದಳದ ಪದಾಧಿಕಾರಿಗಳು ಉಪಸ್ಥಿತರಿದ್ದರು.

Edited By : Nagaraj Tulugeri
Kshetra Samachara

Kshetra Samachara

05/02/2021 08:24 pm

Cinque Terre

8.54 K

Cinque Terre

1

ಸಂಬಂಧಿತ ಸುದ್ದಿ