ಮಂಗಳೂರು: ನಗರದ ಪಣಂಬೂರಿನ ಎನ್ಎಂಪಿಟಿ ಯಾರ್ಡ್ ಬಳಿ ಪಾರ್ಕ್ ಮಾಡಿದ್ದ ಐದು ಲಾರಿಗಳ ಬ್ಯಾಟರಿ ಕಳವು ಪ್ರಕರಣದ ಆರೋಪಿಯನ್ನು ಪೊಲೀಸರು ಬಂಧಿಸಿ, ಸೊತ್ತು ವಶಪಡಿಸಿಕೊಂಡಿದ್ದಾರೆ.
ನಗರದ ಬಜಾಲ್ ಪಡ್ಪು ಜಮ್ಮಾ ಮಸೀದಿ ಬಳಿಯ ನಿವಾಸಿ ಎ.ಎಂ.ಇರ್ಫಾನ್ ಬಂಧಿತ ಆರೋಪಿ. ಈತ ಜನವರಿ 9ರಂದು ರಾತ್ರಿ ವೇಳೆ ಪಣಂಬೂರಿನ ಎನ್ಎಂಪಿಟಿ ಯಾರ್ಡ್ ಬಳಿ ಪಾರ್ಕ್ ಮಾಡಿದ್ದ ಗಣೇಶ್ ಶಿಪ್ಪಿಂಗ್ ಲಾಜಿಸ್ಟಿಕ್ ಕಂಪೆನಿಗೆ ಸೇರಿದ ಐದು ಲಾರಿಗಳ ಬ್ಯಾಟರಿ ಕಳವುಗೈದಿದ್ದ. ಈ ಬಗ್ಗೆ ಪಣಂಬೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಪ್ರಕರಣದ ತನಿಖೆ ಕೈಗೊಂಡ ಪೊಲೀಸರು ಆರೋಪಿ ಎ.ಎಂ.ಇರ್ಫಾನ್ ನನ್ನು ಬಂಧಿಸಿದ್ದಾರೆ. ಈತನಿಂದ 5 ಲಾರಿಗಳ ಬ್ಯಾಟರಿ ಸಹಿತ ಕೃತ್ಯಕ್ಕೆ ಬಳಸಿರುವ ಸ್ಕೂಟರ್ ಹಾಗೂ ಸ್ಪಾನರ್ ಗಳನ್ನು ವಶಪಡಿಸಿಕೊಳ್ಳಲಾಗಿದೆ. ಪೊಲೀಸರು ಸ್ವಾಧೀನಪಡಿಸಿಕೊಂಡ ಸೊತ್ತಿನ ಮೌಲ್ಯ 85 ಸಾವಿರ ರೂ. ಎಂದು ಅಂದಾಜಿಸಲಾಗಿದೆ.
Kshetra Samachara
24/01/2021 02:24 pm