ಮಂಗಳೂರು: ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದ ಈಚರ್ ವಾಹನವನ್ನು ಪೊಲೀಸರು ಸೊತ್ತು ಸಹಿತ ವಶಪಡಿಸಿಕೊಂಡ ಘಟನೆ ನಗರದ ವಳಚ್ಚಿಲ್ ಜಂಕ್ಷನ್ ನ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.
ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣಾ ನಿರೀಕ್ಷಕ ಜಾನ್ಸನ್ ಡಿಸೋಜ ಮತ್ತು ಸಿಬ್ಬಂದಿ ವಳಚ್ಚಿಲ್ ಜಂಕ್ಷನ್ ನ ರಾಷ್ಟ್ರೀಯ ಹೆದ್ದಾರಿ ಬಳಿ ವಾಹನ ತಪಾಸಣೆ ನಡೆಸುತ್ತಿದ್ದರು. ಈ ಸಂದರ್ಭ ಅರ್ಕುಳ ಕಡೆಯಿಂದ ಈಚರ್ ವಾಹನವೊಂದು ಬರುತ್ತಿರುವುದನ್ನು ಕಂಡು ನಿಲ್ಲಿಸುವಂತೆ ಸೂಚನೆ ನೀಡಿದ್ದಾರೆ.
ಈ ಸಂದರ್ಭ ಈಚರ್ ಚಾಲಕ ಸ್ವಲ್ಪ ದೂರ ರಸ್ತೆ ಬದಿ ವಾಹನ ನಿಲ್ಲಿಸಿ ಪರಾರಿಯಾಗಿದ್ದಾನೆ. ತಕ್ಷಣ ಪೊಲೀಸರು ಈಚರ್ ಲಾರಿ ತಪಾಸಣೆ ನಡೆಸಿದಾಗ ಅದರಲ್ಲಿ 7 ಮೆಟ್ರಿಕ್ ಟನ್ ಅಕ್ರಮ ಮರಳು ಪತ್ತೆಯಾಗಿದೆ.
ಪರವಾನಿಗೆ ಇಲ್ಲದೆ ಅಕ್ರಮ ಲಾಭ ಗಳಿಸುವ ಉದ್ದೇಶದಿಂದ ಸಾಗಾಟ ಮಾಡಿರುವ ಈ ಮರಳು ಸಹಿತ ವಾಹನ ವಶಪಡಿಸಿಕೊಂಡ ಪೊಲೀಸರು, ಚಾಲಕ ಮತ್ತು ಮಾಲೀಕನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
Kshetra Samachara
22/01/2021 01:06 pm