ತೊಕ್ಕೊಟ್ಟು : ಇಲ್ಲಿನ ನಗರ ಸಭಾ ವ್ಯಾಪ್ತಿಯ ತೊಕ್ಕೊಟ್ಟು ಒಳಪೇಟೆಯಲ್ಲಿರುವ ಬೀಫ್ ಅಂಗಡಿಯಲ್ಲಿ ಬೆಂಕಿ ಅವಘಡ ಸಂಭವಿಸಿ ಸಂಪೂರ್ಣ ಸುಟ್ಟು ಕರಕಲಾದ ಘಟನೆ ಶುಕ್ರವಾರ ತಡರಾತ್ರಿ ನಡೆದಿದೆ.
ಕಳೆದ 50 ವರ್ಷಗಳಿಂದ ತೊಕ್ಕೊಟ್ಟು ಮಾರುಕಟ್ಟೆಯಲ್ಲಿ ಮಾಂಸ ವ್ಯಾಪಾರ ಮಾಡುತ್ತಿದ್ದ 4 ತಾತ್ಕಾಲಿಕ ಅಂಗಡಿಗಳಿಗೆ ದುಷ್ಕರ್ಮಿಗಳು ಕಳೆದ ರಾತ್ರಿ ಬೆಂಕಿ ಹಚ್ಚಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಘಟನೆಯಿಂದ ಅಂಗಡಿ ಸಹಿತ ಒಳಗಿದ್ದ ಎಲ್ಲಾ ವಸ್ತುಗಳು ಸಂಪೂರ್ಣ ಸುಟ್ಟು ಹೋಗಿವೆ.
ಫಟನಾ ಸ್ಥಳಕ್ಕೆ ನಗರ ಸಭೆಯ ಅಧ್ಯಕ್ಷೆ ಚಿತ್ರಕಲಾ ಚಂದ್ರಕಾಂತ್, ಉಪಾಧ್ಯಕ್ಷ ಅಯ್ಯೂಬ್ ಮಂಚಿಲ, ಮಾಜಿ ಅಧ್ಯಕ್ಷ ರಾದಬಾಜಿಲ್ ಡಿಸೋಜ, ಯು.ಎ. ಇಸ್ಮಾಯಿಲ್, ಸದಸ್ಯರಾದ ಇಬ್ರಾಹಿಂ ಅಶ್ರಫ್, ಅಬ್ದುಲ್ ಅಝೀಝ್ ಕೋಡಿ, ವರ್ತಕರ ಸಂಘದ ಅಬ್ದುಲ್ ಕರೀಂ, ಮನ್ಸೂರ್ ಉಳ್ಳಾಲ ಹಾಗೂ ಅನ್ಸಾರ್ ಅಳೇಕಳ ಭೇಟಿ ನೀಡಿ ಪರಿಶೀಲನೆ ನಡೆಸಿ, ಘಟನೆಗೆ ಖಂಡನೆ ವ್ಯಕ್ತಪಡಿಸಿದ್ದಾರೆ.
Kshetra Samachara
09/01/2021 10:21 am