ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಗುಪ್ತಾಂಗದಲ್ಲಿ ಚಿನ್ನ ಅಡಗಿಸಿಟ್ಟು ಸಾಗಾಟ; ವಿಮಾನ ನಿಲ್ದಾಣದಲ್ಲಿ ಇಬ್ಬರ ಬಂಧನ

ಮಂಗಳೂರು: ಗುಪ್ತಾಂಗದಲ್ಲಿ ಅಡಗಿಸಿಟ್ಟು ದುಬೈನಿಂದ ಅಕ್ರಮವಾಗಿ ಚಿನ್ನ ಸಾಗಾಟ ಮಾಡುತ್ತಿದ್ದ ಇಬ್ಬರನ್ನು ಕಸ್ಟಮ್ಸ್ ಅಧಿಕಾರಿಗಳು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 1.26 ಕೆ.ಜಿ. ಚಿನ್ನ ಸಹಿತ ಬಂಧಿಸಿದ್ದಾರೆ.

ಮಹಮ್ಮದ್ ಜಹೀರ್ ಅನೀಝ್ ಹಾಗೂ ವಾಸೀಂ ಮರ್ಜನ್ ಬಂಧಿತರು.

ಆರೋಪಿಗಳು ಡಿ. 30ರಂದು ದುಬೈನಿಂದ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದರು. ಈ ಸಂದರ್ಭ ಕಸ್ಟಮ್ಸ್ ಅಧಿಕಾರಿಗಳು ತಪಾಸಣೆ ನಡೆಸಿದಾಗ ಮಹಮ್ಮದ್ ಜಹೀರ್ ಅನೀಝ್ ಹಾಗೂ ವಾಸೀಂ ಮರ್ಜನ್ ಗುಪ್ತಾಂಗದಲ್ಲಿ ಚಿನ್ನ ಇರಿಸಿದ್ದು ಪತ್ತೆಯಾಗಿದೆ. ತಕ್ಷಣ ಅವರನ್ನು ಚಿನ್ನ ಸಹಿತ ಬಂಧಿಸಲಾಗಿದೆ. ಕಸ್ಟಮ್ಸ್ ಅಧಿಕಾರಿಗಳು ಒಟ್ಟು 64,13,400 ರೂ. ಮೌಲ್ಯದ 1.26 ಕೆ.ಜಿ. ಚಿನ್ನವನ್ನು ಇವರಿಂದ ವಶಪಡಿಸಿಕೊಂಡಿದ್ದಾರೆ.

Edited By : Nagaraj Tulugeri
Kshetra Samachara

Kshetra Samachara

31/12/2020 08:39 pm

Cinque Terre

18.49 K

Cinque Terre

0

ಸಂಬಂಧಿತ ಸುದ್ದಿ