ಮುಲ್ಕಿ: ಕೂಳೂರು ಸೇತುವೆಯಿಂದ ಮಹಿಳೆಯೊಬ್ಬರು ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಶುಕ್ರವಾರ ಸಂಜೆ ನಡೆದಿದೆ.
ಮಹಿಳೆಯನ್ನು ಕೃಷ್ಣಾಪುರದ ನಿವಾಸಿ, ವಿವಾಹಿತೆ ಜುಲೈಖಾ ಎಂದು ಗುರುತಿಸಲಾಗಿದೆ. ಮಹಿಳೆ ತಾನು ಬಂದಿದ್ದ ದ್ವಿಚಕ್ರವಾಹನವನ್ನು ಸೇತುವೆ ಬಳಿ ನಿಲ್ಲಿಸಿ ಏಕಾಏಕಿ ಸೇತುವೆಯಿಂದ ಹಾರಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಈಕೆ ನದಿಗೆ ಹಾರಿದ್ದನ್ನು ಗಮನಿಸಿ ಕೂಡಲೇ ಕಾರ್ಯಪ್ರವೃತ್ತರಾದ ಮಂಗಳೂರು ಸಂಚಾರ ಉತ್ತರ ಠಾಣೆ ಇಂಟರ್ ಸೆಪ್ಟರ್ ವಾಹನದ ಎಎಸ್‌ಐ ಮಂಜುನಾಥ ಹಾಗೂ ಸಿಬಂದಿ ಈಕೆಯ ರಕ್ಷಣೆಗೆ ಮುಂದಾಗಿ, ನದಿಯಲ್ಲಿದ್ದ ಸ್ಥಳೀಯರು ದೋಣಿ ಮೂಲಕ ನೆರವಿಗೆ ಧಾವಿಸಿ ರಕ್ಷಿಸಿದರು. ಬಳಿಕ ಮಹಿಳೆಯನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚೇತರಿಸಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Kshetra Samachara
26/12/2020 10:52 am