ಬಂಟ್ವಾಳ: ವಿದ್ಯುತ್ ಶಾಕ್ ತಗುಲಿ ಕೂಲಿ ಕಾರ್ಮಿಕ ಮೃತಪಟ್ಟ ಘಟನೆ ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ದೇವಸ್ಯ ಎಂಬಲ್ಲಿ ಬುಧವಾರ ನಡೆದಿದೆ.
ಕರೋಪಾಡಿ ಗ್ರಾಮದ ಚೆಲ್ಲಂಗಾರು ನಿವಾಸಿ ಗೋವಿಂದ ನಾಯ್ಕರ ಪುತ್ರ, ಮಂಗಿಲಪದವಿನಲ್ಲಿ ಬಾಡಿಗೆ ಮನೆಯಲ್ಲಿ ವಾಸವಿರುವ ವಿಶ್ವನಾಥ(36) ಮೃತಪಟ್ಟವರು. ಕಳೆದ ಕೆಲಸಮಯಗಳಿಂದ ವಿಟ್ಲ ಕಸಬ ಗ್ರಾಮದ ದೇವಸ್ಯ ಎಂಬಲ್ಲಿನ ಕೆಲಸ ಮಾಡಿಕೊಂಡಿದ್ದರು.
ಅ.6ರಂದು ರಾತ್ರಿ ವಿಶ್ವನಾಥ ಅವರು ತೋಟದ ಪಂಪ್ ಶೆಡ್ ನಲ್ಲಿ ಮೋಟರ್ ಸ್ವಿಚ್ ಹಾಕಲೆಂದು ತೆರಳಿದಾಗ ವಿದ್ಯುತ್ ಬಾರದ ಹಿನ್ನೆಲೆಯಲ್ಲಿ ಅಲ್ಲೇ ಪಕ್ಕದಲ್ಲಿದ್ದ ವಿದ್ಯುತ್ ಕಂಬದಲ್ಲಿದ್ದ ಸರ್ವೀಸ್ ವಯರನ್ನು ಬಿದಿರಿನ ಕೋಲಿನಿಂದ ಸರಿಪಡಿಸುತ್ತಿದ್ದ ವೇಳೆ ವಿದ್ಯುತ್ ಶಾಕ್ ತಗುಲಿದೆ. ಘಟನೆಗೆ ಸಂಬಂಧಿಸಿ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
07/10/2020 10:18 pm