ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೂಡುಬಿದಿರೆಯಲ್ಲಿ ಸರಣಿ ಕಳ್ಳತನ

ಮೂಡುಬಿದಿರೆ: ಮೂಡುಬಿದಿರೆ ಪುರಸಭೆಯ ವ್ಯಾಪ್ತಿಯ ನಾಲ್ಕು ಕಡೆ ಮಂಗಳವಾರ ರಾತ್ರಿ ಸರಣಿ ಕಳ್ಳತನ ನಡದಿದೆ.

ಕೊಡಂಗಲ್ಲಿನ ಮಾರಿಗುಡಿಯ ಬಾಗಿಲಿನ ಬೀಗ ಮುರಿದು ಒಳನುಗ್ಗಿದ ಕಳ್ಳರು ಕಾಣಿಕೆ ಡಬ್ಬಿಯ ಬೀಗ ಒಡೆದು ಚಿಲ್ಲರೆ ಹಣ ತೆಗೆದಿದ್ದಾರೆನ್ನಲಾಗಿದೆ.

ಗರ್ಭಗುಡಿಯಲ್ಲಿದ್ದ ಬೆಳ್ಳಿಯ ಮೂರ್ತಿಯನ್ನು ಹೊರಗೆ ತಂದಿಟ್ಟು ನಂತರ ಅಲ್ಲೆ ಬಿಟ್ಟು ಹೋಗಿದ್ದಾರೆ. ವಿದ್ಯಾಗಿರಿಯ ಲಿಟ್ಲ್ ಸ್ಟಾರ್ ಸ್ಕೂಲ್‍ಗೆ ನುಗ್ಗಿ ಎರಡು ಕಂಪ್ಯೂಟರ್, ಒಂದು ಟಿ.ವಿ ಮತ್ತು ಒಂದು ಡಿವಿಆರ್ ಕದ್ದೊಯ್ದಿದ್ದಾರೆ. ಅಪೂರ್ವ ನಗರದಲ್ಲಿ ಎರಡು ಮನೆಗಳಿಗೆ ನುಗ್ಗಿ ಚಿನ್ನಾಭರಣಗಳಿಗೆ ಜಾಲಾಡಿಸಿದ ಕಳ್ಳರು ಬರಿಗೈಯಲ್ಲಿ ವಾಪಾಸಾಗಿದ್ದಾರೆ.

ಎಸಿಪಿ ಬೆಳ್ಳಿಯಪ್ಪ, ಡಿಸಿಪಿ ಜೀವನ್ ಕುಮಾರ್ ಗಾಂವ್ಕರ್, ಮೂಡುಬಿದಿರೆ ಇನ್‍ಸ್ಪೆಕ್ಟರ್ ದಿನೇಶ್ ಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬೆರಳಚ್ಚು ತಜ್ಞರನ್ನು, ಶ್ವಾನದಳವನ್ನು ಸ್ಥಳಕ್ಕೆ ಕರೆಸಿ ಮಾಹಿತಿ ಸಂಗ್ರಹಿಸಲಾಗಿದೆ. ಮೂಡುಬಿದಿರೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

Edited By :
Kshetra Samachara

Kshetra Samachara

23/09/2020 08:58 pm

Cinque Terre

24.15 K

Cinque Terre

0

ಸಂಬಂಧಿತ ಸುದ್ದಿ