ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೂಡುಬಿದಿರೆ: ಕೊಡಂಗಲ್ಲು ಮಾರಿಗುಡಿಯಲ್ಲಿ 1.50 ಮೌಲ್ಯದ ಸ್ವತ್ತು ಕಳ್ಳತನ

ಮೂಡುಬಿದಿರೆ: ಇಲ್ಲಿನ ಪುರಸಭೆ ವ್ಯಾಪ್ತಿಯ ಶ್ರೀಮಹಾವೀರ ಕಾಲೇಜು ಬಳಿಯ ಕೊಡಂಗಲ್ಲು ಮಾರಿಗುಡಿ ದೇವಳದಲ್ಲಿ ಮಂಗಳವಾರ ತಡರಾತ್ರಿ ಕಳ್ಳರು ನುಗ್ಗಿದ್ದು , ಗರ್ಭಗುಡಿಯಲ್ಲಿದ್ದ ಚಿನ್ನ, ಬೆಳ್ಳಿಯ ಆಭರಣಗಳನ್ನು ಕಳತನ ಮಾಡಿದ್ದಾರೆ.

ಮೂಡುಬಿದಿರೆ-ಬೆಳ್ತಂಗಡಿ ರಾಜ್ಯ ಹೆದ್ದಾರಿ ಪಕ್ಕದಲ್ಲಿರುವ ಮಾರಿಗುಡಿ ದೇವಳದ ಮುಖ್ಯಧ್ವಾರದ ಬಾಗಿಲಿನ ಬೀಗ ಒಡೆದ ಖದೀಮರು, ದೇವರ ಮೂರ್ತಿಗೆ ಹಾಕಲಾಗಿರುವ ಚಿನ್ನದ ಕರಿಮಣಿ ಸರ, ಕಿವಿಯ ಓಲೆ, ಬೆಳ್ಳಿಯ ಪ್ರಭಾವಳಿ ಸೇರಿದಂತೆ ಒಟ್ಟು 1.50 ಲಕ್ಷ ಮೌಲ್ಯದ ಸ್ವತ್ತು ಕಳ್ಳತನವಾಗಿದೆ ಎಂದು ಅಂದಾಸಲಾಗಿದೆ.

ಇನ್ನೂ ಮೂಡುಬಿದಿರೆ ಪೊಲೀಸರು ಸ್ಥಳಕ್ಕೆ ಬೇಟಿ ನೀಡಿ, ಪರಿಶೀಲನೆ ಮಾಡುತ್ತಿದ್ದಾರೆ.

Edited By : Nirmala Aralikatti
Kshetra Samachara

Kshetra Samachara

23/09/2020 10:20 am

Cinque Terre

5.69 K

Cinque Terre

0

ಸಂಬಂಧಿತ ಸುದ್ದಿ