ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾಸರಗೋಡು: 2.5 ಕೋಟಿ ಮೌಲ್ಯದ ಶ್ರೀಗಂಧ ವಶ, ಆರೋಪಿಗಳು ಪರಾರಿ

ಕಾಸರಗೋಡು: ಅಕ್ರಮವಾಗಿ ಸಾಗಿಸುತ್ತಿದ್ದ ಸುಮಾರು 2.5 ಕೋಟಿ ರೂ. ಮೌಲ್ಯದ ಒಂದು ಕ್ವಿಂಟಾಲ್ ಶ್ರೀಗಂಧದ ಕೊರಡುಗಳನ್ನು ಕಾಸರಗೋಡು ಜಿಲ್ಲಾಧಿಕಾರಿ ಡಾ. ಡಿ. ಸಜಿತ್ ಬಾಬು ನೇತೃತ್ವದ ತಂಡ ಇಂದು ಮುಂಜಾನೆ ವಶಪಡಿಸಿದೆ.

ಕಾಸರಗೋಡು ನಗರ ಹೊರವಲಯದ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಅಧಿಕೃತ ನಿವಾಸದ ಸಮೀಪದಿಂದ ಶ್ರೀಗಂಧದ ಕೊರಡುಗಳನ್ನು ಅಕ್ರಮ ಸಾಗಾಟ ಮಾಡಲಾಗುತ್ತಿತ್ತು.

ಸಿಮೆಂಟ್ ಸಾಗಾಟ ಮಾಡುವ ಲಾರಿಯಲ್ಲಿ ವಿಶೇಷ ಕ್ಯಾಬಿನ್ ನಿರ್ಮಿಸಿ ಅದರೊಳಗೆ ಶ್ರೀಗಂಧದ ಕೊರಡುಗಳನ್ನು ತುಂಬಿಸಿ ಸಾಗಿಸಲಾಗುತ್ತಿತ್ತು ಎಂದು ತಿಳಿದು ಬಂದಿದ್ದು, ಪ್ರಕರಣದಲ್ಲಿ ಭಾಗಿಯಾಗಿದ್ದ ಮನೆ ಮಾಲೀಕ ಮತ್ತಿತರ ಆರೋಪಿಗಳು ದಾಳಿ ಸಂದರ್ಭ ಪರಾರಿಯಾಗಿದ್ದಾರೆ.

ಶ್ರೀಗಂಧವನ್ನು ಅರಣ್ಯ ಇಲಾಖೆಗೆ ಹಸ್ತಾಂತರಿಸಲಾಗುವುದು ಎಂದ ಪೊಲೀಸರು, ಈ ಸಂಬಂಧ ಹೆಚ್ಚಿನ ತನಿಖೆ  ನಡೆಸಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.

Edited By :
Kshetra Samachara

Kshetra Samachara

06/10/2020 05:11 pm

Cinque Terre

8.5 K

Cinque Terre

0

ಸಂಬಂಧಿತ ಸುದ್ದಿ