ಕಾಸರಗೋಡು: ಜಫ್ತಿ ಬೆದರಿಕೆ ಹಿನ್ನಲೆಯಲ್ಲಿ ರೈತರೊಬ್ಬರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಪುತ್ತಿಗೆ ಸಮೀಪದ ಬಾಡೂರಿನಲ್ಲಿ ನಡೆದಿದೆ.
ಬಾಡೂರು ನಯಮೊಗರುವಿನ ದೂಮಣ್ಣ ರೈ (58) ಆತ್ಮಹತ್ಯೆ ಶರಣಾದವರು. ದೂಮಣ್ಣ ಅವರು ಬ್ಯಾಂಕ್‌ಗಳಿಂದ 40 ಲಕ್ಷ ರೂ.ಗಳಷ್ಟು ಸಾಲ ಪಡೆದಿದ್ದರು. ಬ್ಯಾಂಕ್‌ನಿಂದ ಸಾಲ ಪಡೆದು ಮಾಡಿದ ಕೃಷಿ ಪ್ರಕೃತಿ ವಿಕೋಪದಿಂದ ನಾಶವಾಗಿದ್ದು, ಲಭಿಸಿದ ಉತ್ಪನ್ನಗಳಿಗೆ ಸೂಕ್ತ ಬೆಲೆ ಸಿಗದೆ ಸಾಲವನ್ನು ಮರುಪಾವತಿಸದ ಹಿನ್ನೆಲೆಯಲ್ಲಿ ಬ್ಯಾಂಕ್ ಜಫ್ತಿ ನೋಟಿಸ್ ಕಳುಹಿಸಿತ್ತು. ಇದರಿಂದ ಮನನೊಂದು ಶುಕ್ರವಾರ ರಾತ್ರಿ ವಿಷ ಸೇವಿಸಿದ್ದರು. ಗಂಭೀರ ಸ್ಥಿತಿಯಲ್ಲಿ ಕಾಸರಗೋಡು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಭಾನುವಾರ ರಾತ್ರಿ ಮೃತಪಟ್ಟಿದ್ದಾರೆ.
Kshetra Samachara
05/10/2020 09:05 pm