ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಂಟ್ವಾಳ: ಅರಳ ಗ್ರಾಮದಲ್ಲಿ ಹಲ್ಲೆ- ಕೊಲೆ ಬೆದರಿಕೆ, ದರೋಡೆ; ಪ್ರತ್ಯೇಕ ಪ್ರಕರಣ ದಾಖಲು

ಬಂಟ್ವಾಳ: ಬಂಟ್ವಾಳ ತಾಲೂಕಿನ ಅರಳ ಗ್ರಾಮದಲ್ಲಿ ಹಲ್ಲೆ, ಕೊಲೆ ಬೆದರಿಕೆ ಹಾಗೂ ರಾಬರಿ ನಡೆಸಿದ ಎರಡು ಪ್ರತ್ಯೇಕ ದೂರು ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದಾಖಲಾಗಿವೆ. ಎರಡೂ ಪ್ರಕರಣಗಳು ಗ್ರಾಪಂ ಚುನಾವಣೆಯ ಬಳಿಕ ನಡೆದಿದ್ದು, ಭಿನ್ನ ರಾಜಕೀಯ ಪಕ್ಷಗಳಿಗೆ ಸೇರಿದ ಕಾರ್ಯಕರ್ತರದ್ದು ಎನ್ನಲಾಗಿದೆ.

ವ್ಯಕ್ತಿಯೊಬ್ಬರು ನೀಡಿದ ದೂರಿನಂತೆ ತೋಟಕ್ಕೆ ನೀರು ಬಿಟ್ಟು ಮರಳುವ ಸಂದರ್ಭ 16 ಮಂದಿ ತಲವಾರು ತೋರಿಸಿ, ದೈಹಿಕ ಹಲ್ಲೆ ನಡೆಸಿ, ಚಿನ್ನದ ಉಂಗುರ ಮತ್ತು ವಾಚನ್ನು ಕಿತ್ತುಕೊಂಡು ಅವರ ಪತ್ನಿ, ಮಗನಿಗೆ ನಿಂದಿಸಿ, ಕೊಲೆ ಮಾಡುವುದಾಗಿ ಹೇಳಿ ಕಾರಿನಲ್ಲಿ ಪರಾರಿಯಾಗಿದ್ದಾರೆ.

ಅದೇ ಗ್ರಾಮದ ಮಹಿಳೆಯೊಬ್ಬರು ನೀಡಿದ ದೂರಿನಂತೆ ನಾಲ್ವರು ಕತ್ತಿ ಮತ್ತಿತರ ಮಾರಕಾಯುಧಗಳೊಂದಿಗೆ ಮನೆಗೆ ದಾಳಿ ಮಾಡಿದ್ದು, ಪಾನಮತ್ತರಾಗಿದ್ದ ಈ ನಾಲ್ವರು ತನ್ನ ಪತಿಗೆ ಹಲ್ಲೆ ನಡೆಸಿದ್ದಾಗಿ ಹೇಳಿದ್ದಾರೆ. ಈ ಸಂದರ್ಭ ಕೊರಳಿನಲ್ಲಿದ್ದ ಚಿನ್ನದ ಸರವನ್ನು ದೋಚಿದ್ದಾಗಿ ದೂರಲಾಗಿದ್ದು, ಬಳಿಕ ಜೀವ ಬೆದರಿಕೆ ಹಾಕಿದ್ದಾಗಿ ದೂರಿನಲ್ಲಿ ತಿಳಿಸಿದ್ದಾರೆ. ಎರಡೂ ದೂರುಗಳನ್ನು ದಾಖಲಿಸಿಕೊಂಡಿರುವ ಬಂಟ್ವಾಳ ಗ್ರಾಮಾಂತರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Edited By : Vijay Kumar
Kshetra Samachara

Kshetra Samachara

23/12/2020 11:18 pm

Cinque Terre

9.3 K

Cinque Terre

0

ಸಂಬಂಧಿತ ಸುದ್ದಿ