ಬಂಟ್ವಾಳ: ಇಲ್ಲಿನ ಪುರಸಭೆಯ ಹೆಲ್ತ್ ಅಫೀಸರ್ ಒಬ್ಬರು ಮೇಲಧಿಕಾರಿಯ ಮಾನಸಿಕ ಹಿಂಸೆಯಿಂದ ಬೇಸತ್ತು ಆತ್ಮಹತ್ಯೆ ಮಾಡುತ್ತಿದ್ದೇನೆ ಎಂದು ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ.
ಮೇಲಧಿಕಾರಿಯ ಮಾನಸಿಕ ಹಿಂಸೆ ತಾಳಲಾರದೆ ವಿಟ್ಲ ಪುಣಚ ನಿವಾಸಿ ಬಂಟ್ವಾಳ ಪುರಸಭೆಯ ಹೆಲ್ತ್ ಆಫೀಸರ್ ಪತ್ರ ಬರೆದಿಟ್ಟು, ಮೆಲ್ಕಾರ್‌ನಲ್ಲಿ ವಿಷ ಪದಾರ್ಥ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು.
ಈ ವೇಳೆ ಅವರನ್ನು ಪುತ್ತೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರು ಚೇತರಿಕೊಳ್ಳುತ್ತಿದಾರೆ.
ಸುಳ್ಯ ಪುರಸಭೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಇವರನ್ನು ಕಳೆದ ಐದು ತಿಂಗಳ ಹಿಂದೆ ಬಂಟ್ವಾಳ ಪುರಸಭೆಗೆ ವರ್ಗಾಯಿಸಲಾಗಿತ್ತು. ಮುಖ್ಯಾಧಿಕಾರಿ ಪ್ರತಿದಿನ ಅನಗತ್ಯ ಬೈಯ್ಯುವುದು, ಮಾನಸಿಕ ಕಿರುಕುಳ ನೀಡುತ್ತಿದ್ದಾರೆ. ಇದುವರೆಗೆ ನಾನು ಮುಖ್ಯಾಧಿಕಾರಿಗಳಿಗೆ ಯಾವುದೇ ರೀತಿಯ ಎದುರುತ್ತರ ನೀಡಿಲ್ಲ. ಅವರಿಗೆ ನನ್ನ ಅಮ್ಮನ ಸ್ಥಾನ ನೀಡಿರುತ್ತೇನೆ ಎಂದು ಹೆಲ್ತ್ ಆಫೀಸರ್ ತನ್ನ ಡೆತ್‌ನೋಟ್‌ನಲ್ಲಿ ಬರೆದಿದ್ದಾರೆ.
Kshetra Samachara
10/12/2020 10:18 pm