ಮಂಗಳೂರು: ಕದ್ದು ಸಾಗಿಸುತ್ತಿದ್ದ ಏಳು ಹಸುಗಳನ್ನು ಮುದುಂಗಾರುಕಟ್ಟೆಯ ಹಿಂದೂ ಜಾಗರಣ ವೇದಿಕೆ ರಕ್ಷಿಸಿದೆ.
ದುಷ್ಕರ್ಮಿಗಳು ಮಂಗಳವಾರ ರಾತ್ರಿ ಹಸುಗಳನ್ನು ಕದ್ದು ಅಪರಿಚಿತ ವಾಹನದಲ್ಲಿ ರಾಮಣ್ಣ ಗುಡ್ಡೆಗೆ ತಂದಿದ್ದರು. ಈ ಬಗ್ಗೆ ಮಾಹಿತಿ ಸಿಗುತ್ತಿದ್ದಂತೆ ಹಿಂದೂ ಜಾಗರಣ ವೇದಿಕೆಯ ದುರ್ಗಾಲಯ ಘಟಕದ ಕಾರ್ಯಕರ್ತರು ದಾಳಿ ನಡೆಸಿದ್ದಾರೆ.
ಮುದುಂಗಾರುಕಟ್ಟೆಯ ಹಿಂದೂ ಜಾಗರಣ ವೇದಿಕೆ ದುರ್ಗಾಲಯ ಘಟಕದ ಕಾರ್ಯಕರ್ತರು ಡಿಸೆಂಬರ್ 8 ರ ಮಂಗಳವಾರ ಬೆಳಿಗ್ಗೆ ಬಾಳೆಪುಣಿಯಲ್ಲಿ ದಾಳಿ ನಡೆಸಿ ಏಳು ಹಸುಗಳನ್ನು ರಕ್ಷಿಸಿದ್ದಾರೆ. ಆರೋಪಿಗಳು ಪರಾರಿಯಾಗಿದ್ದು, ಮೂರು ಗರ್ಭಿಣಿ ಹಸುಗಳು ಮತ್ತು ನಾಲ್ಕು ಕರುಗಳನ್ನು ರಕ್ಷಿಸಲಾಗಿದೆ. ಬಳಿಕ ಅವುಗಳನ್ನು ಪುಣ್ಯಕೋಟಿ ಗೋಶಾಲೆಗೆ ಹಸ್ತಾಂತರಿಸಲಾಯಿತು.
Kshetra Samachara
09/12/2020 05:39 pm