ಮಂಗಳೂರು: ನಗರದ ಪ್ರಮುಖ ಬೀದಿಗಳ ಗೋಡೆಗಳಲ್ಲಿ 'ಉಗ್ರ' ಸಂಘಟನೆ ಪರ ಮತ್ತು ವಿವಾದಾತ್ಮಕ ಬರವಣಿಗೆ ಪ್ರಕರಣ ಸಂಬಂಧ ಬಂಧಿತನಾದ ಆರೋಪಿ ಮೊಹಮ್ಮದ್ ನಝೀರ್ ಪರ ವಕಾಲತ್ತು ವಹಿಸದಂತೆ ರಾಮ್ ಸೇನಾ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ವಕೀಲರ ಸಂಘವನ್ನ ಒತ್ತಾಯಿಸಿದೆ. ಮಂಗಳೂರು ವಕೀಲರ ಸಂಘದ ಪ್ರದಾನ ಕಾರ್ಯದರ್ಶಿ ಎಚ್.ವಿ. ರಾಘವೇಂದ್ರ ಅವರನ್ನು ಭೇಟಿಯಾದ ರಾಮ್ ಸೇನಾ ಮುಖಂಡರು ಈ ಕುರಿತು ಮನವಿ ಮಾಡಿಕೊಂಡರು. ಈ ಸಂದರ್ಭದಲ್ಲಿ ರಾಮ್ ಸೇನಾ ಜಿಲ್ಲಾ ಅಧ್ಯಕ್ಷ ಕಿರಣ್ ಅಮೀನ್ ಉರ್ವಸ್ಟೋರ್, ಉಪಾಧ್ಯಕ್ಷ ಹರ್ಷಿತ್ ಅಡ್ಯಾರ್, ಮುಖಂಡರಾದ ಯತೀಶ್ ಬಜಪೆ, ಕಾರ್ತಿಕ್ ಕುಲಾಲ್, ದಿನೇಶ್ ಕೋಟ್ಯಾನ್, ದೇವಿಪ್ರಸಾದ್ ಶೆಟ್ಟಿ ಉಪಸ್ಥಿತರಿದ್ದರು.
Kshetra Samachara
04/12/2020 01:54 pm