ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಎರಡು ಪಾಸ್ ಪೋರ್ಟ್ ಪಡೆದು ವಂಚನೆ: ಬಂಟ್ವಾಳದ ಓರ್ವನ ವಿರುದ್ಧ ಪ್ರಕರಣ ದಾಖಲು

ಬಂಟ್ವಾಳ: ಎರಡೆರಡು ಪಾಸ್ ಪೋರ್ಟ್ ಗಳನ್ನು ಹೊಂದಿರುವ ಆರೋಪದಲ್ಲಿ ಓರ್ವನ ವಿರುದ್ಧ ಪ್ರಕರಣ‌ ದಾ‌ಖಲಾಗಿದೆ.

ಸಂಗಬೆಟ್ಟು ಗ್ರಾಮದ ಕಲ್ಕುರಿ ನಿವಾಸಿ ಲ್ಯಾನ್ಸಿ ಸಿಕ್ವೇರಾ(50) ಎಂಬವರ ಮೇಲೆ ಬೆಂಗಳೂರು ಪ್ರಾದೇಶಿಕ ಕಚೇರಿಯ ಸಹಾಯಕ ಪಾಸ್ ಪೋರ್ಟ್ ಅಧಿಕಾರಿ ದ.ಕ. ಎಸ್ಪಿಯವರ ಮೂಲಕ ಪ್ರಕರಣ ದಾಖಲಿಸಿದ್ದಾರೆ.

ಆರೋಪಿ ಲ್ಯಾನ್ಸಿ ಮೊದಲು ಬೆಂಗಳೂರಿನಲ್ಲಿ ಪಾಸ್ ಪೋರ್ಟ್ ಪಡೆದಿದ್ದ.‌ ಬಳಿಕ 2002ರ ನವೆಂಬರ್ 15ರಂದು ಮುಂಬೈನಲ್ಲಿ ಎರಡನೇ ಪಾಸ್ ಪೋರ್ಟ್ ಪಾಸ್ ಪೋರ್ಟ್ ಪಡೆದಿದ್ದ.

ಎರಡೂ ಪಾಸ್ ಪೋರ್ಟ್ ಗಳಲ್ಲಿ ಮಾಹಿತಿಯನ್ನೂ ಪ್ರತ್ಯೇಕವಾಗಿ ನೀಡಿದ್ದ. ಈ ಹಿನ್ನಲೆಯಲ್ಲಿ ಬೆಂಗಳೂರು ಪ್ರಾದೇಶಿಕ ಕಚೇರಿಯ ಸಹಾಯಕ ಪಾಸ್ ಪೋರ್ಟ್ ಅಧಿಕಾರಿ ದ.ಕ. ಎಸ್ಪಿಯವರಿಗೆ ದೂರು ನೀಡಿದ್ದರು. ಈ‌ಸಂಬಂಧ ಪಾಸ್ ಪೋರ್ಟ್ ಅಧಿಕಾರಿಯ ದೂರಿನನ್ವಯ

ಎಸ್ಪಿ ಅವರ ಆದೇಶದಂತೆ ಆರೋಪಿಯ ವಿರುದ್ಧ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Edited By : Nagaraj Tulugeri
Kshetra Samachara

Kshetra Samachara

04/12/2020 11:28 am

Cinque Terre

10 K

Cinque Terre

0

ಸಂಬಂಧಿತ ಸುದ್ದಿ