ಮಂಗಳೂರು: ಉಗ್ರ ಸಂಘಟನೆ ಪರ ಜೈಕಾರ ಘೋಷಣೆ ಬರಹ ಕಾಣಿಸಿಕೊಂಡ ಎರಡೇ ದಿನಗಳ ಅಂತರದಲ್ಲಿ ನಗರದ ಕೋರ್ಟ್ ಆವರಣದಲ್ಲಿ ಮತ್ತೊಂದು ಇಂತಹದ್ದೇ ಮತಾಂಧ ಬರವಣಿಗೆ ಕಾಣಿಸಿಕೊಂಡಿದೆ. ಈ ಬಾರಿ ಉರ್ದುವಿನಲ್ಲಿ ಕಾಣಿಸಿಕೊಂಡ ಬರವಣಿಗೆಯಲ್ಲಿ 'ಪ್ರವಾದಿಗೆ ಕೋಪ ಬಂದರೆ ದೇಹದಿಂದ ತಲೆ ಬೇರ್ಪಡುವುದು' ಅನ್ನೋ ಅರ್ಥದಲ್ಲಿ ಮತ್ತದೇ ಕಪ್ಪು ಬಣ್ಣದ ಸ್ಪ್ರೇ ಪೇಂಟ್ ಬಳಿದು ಕುಕೃತ್ಯ ನಡೆಸಲಾಗಿದೆ.
ನಿನ್ನೆ ಸಂಜೆ ವೇಳೆಗೆ ಈ ಕುಕಾರ್ಯ ಗಮನಕ್ಕೆ ಬಂದಿದ್ದು, ತಕ್ಷಣ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ, ಬಿಳಿಯ ಬಣ್ಣ ಬಳಿದು ಅಳಿಸಿ ಹಾಕಿದ್ದಾರೆ.
ಕದ್ರಿ ಠಾಣಾ ವ್ಯಾಪ್ತಿಯಲ್ಲಿ ನಡೆದ ಕೃತ್ಯಕ್ಕೂ, ಇದಕ್ಕೂ ಸಾಕಷ್ಟು ಸಾಮ್ಯತೆ ಕಂಡುಬಂದಿದ್ದು, ನಗರ ಪೊಲೀಸರಿಗೆ ಸವಾಲಾಗಿ ಪರಿಣಮಿಸಿದೆ.
ಈ ಕುರಿತು ಬಂದರು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕೃತ್ಯ ಎಸಗಿದ ದುಷ್ಕರ್ಮಿಗಳ ಬಂಧನಕ್ಕೆ ತೀವ್ರ ಶೋಧ ಆರಂಭವಾಗಿದೆ.
Kshetra Samachara
29/11/2020 10:21 am