ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಂಟ್ವಾಳ: ಬೆಂಜನಪದವಿನಲ್ಲಿ ಮನೆ ತೋಟದಾಳು ಸಾವು

ಬಂಟ್ವಾಳ: ತಾಲೂಕಿನ ಬೆಂಜನಪದವು ಎಂಬಲ್ಲಿ ಮನೆ ತೋಟದ ಕೆಲಸ ಮಾಡಿಕೊಂಡಿದ್ದ ಲಕ್ಷ್ಮಣ ಎಂಬವರು ಸಾವನ್ನಪ್ಪಿದ್ದಾರೆ.

3 ತಿಂಗಳ ಹಿಂದೆ ವಿಜಯ ಪ್ರಕಾಶ್ ಎಂಬವರ ಮನೆಗೆ ತೋಟದ ಕೆಲಸ ಕೇಳಿಕೊಂಡು ಲಕ್ಷ್ಮಣ ಬಂದಿದ್ದು, ಮನೆಯ ಶೆಡ್ ನಲ್ಲಿಯೇ ಹಿಟಾಚಿ ಚಾಲಕ ಮಲ್ಲಪ್ಪ ಅವರ ಜೊತೆ ರಾತ್ರಿ ಉಳಕೊಂಡಿರುತ್ತಿದ್ದರು.

ನ.23ರಂದು ಕೆಲಸ ಮಾಡಿ ರಾತ್ರಿ ಶೆಡ್ ನಲ್ಲಿ ಚಾಲಕ ಮಲ್ಲಪ್ಪನ ಜೊತೆ ಮಲಗಿದ್ದು, ನ.24ರಂದು ಬೆಳಿಗ್ಗೆ 6 ಗಂಟೆ ಸಮಯಕ್ಕೆ ಮಲ್ಲಪ್ಪ ಅವರಿಗೆ ಲಕ್ಷ್ಮಣ ಟಾಯ್ಲೆಟ್ ಹೊರಗೆ ಕುಸಿದು ಬಿದ್ದಿರುವುದು ಕಂಡುಬಂದಿದ್ದು, ಕೂಡಲೇ ವಿಜಯ ಪ್ರಕಾಶ್ ಆಂಬ್ಯುಲೆನ್ಸ್ ನಲ್ಲಿ ತುಂಬೆ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋದಾಗ, ವೈದ್ಯರು ಪರಿಶೀಲಿಸಿ, ಹೃದಯಾಘಾತ ಅಥವಾ ಇನ್ಯಾವುದೋ ಕಾರಣದಿಂದ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.

ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Edited By : Nirmala Aralikatti
Kshetra Samachara

Kshetra Samachara

25/11/2020 08:31 pm

Cinque Terre

17.56 K

Cinque Terre

0

ಸಂಬಂಧಿತ ಸುದ್ದಿ