ಮಂಗಳೂರು: ಅಶ್ಲೀಲ ಫೋಟೊ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಡುವುದಾಗಿ ಯುವತಿ ಬೆದರಿಕೆ ಹಾಕಿರುವುದಾಗಿ ಶರ್ಬತ್ ಕಟ್ಟೆ ನಿವಾಸಿ ಮಂಗಳೂರು ಪೂರ್ವ (ಕದ್ರಿ) ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಮಂಗಳೂರಿನ ಶರ್ಬತ್‌ಕಟ್ಟೆ ವ್ಯಕ್ತಿಗೆ ಆಗಸ್ಟ್‌ನಲ್ಲಿ ಯುವತಿಯೊಬ್ಬಳು ಫೇಸ್‌ಬುಕ್‌ನಲ್ಲಿ ಪರಿಚಯವಾಗಿದ್ದಾಳೆ. ಬಳಿಕ ಫೇಸ್‌ಬುಕ್ ಮೆಸೆಂಜರ್ ಮೂಲಕ ನಿರಂತರವಾಗಿ ತನ್ನ ಅಶ್ಲೀಲ ಚಿತ್ರ ಕಳುಹಿಸಿದ್ದಾಳೆ.
ಅಲ್ಲದೆ, ಬಳಿಕ ಶರ್ಬತ್‌ಕಟ್ಟೆ ವ್ಯಕ್ತಿಗೂ ಅಶ್ಲೀಲ ಭಂಗಿಯ ಫೋಟೊ ಕಳುಹಿಸುವಂತೆ ಪ್ರೇರೇಪಿಸಿದ್ದಾಳೆ.
ಇದರಿಂದ ಪ್ರೇರಿತರಾದ ಅವರು ಯುವತಿಗೆ ಫೋಟೊ ಕಳುಹಿಸಿದ್ದಾರೆ. ಅದೇ ಫೋಟೊ ಇಟ್ಟುಕೊಂಡು ಆರೋಪಿಗಳು ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾರೆ.
ಹಣ ನೀಡದಿದ್ದಲ್ಲಿ ಈ ಅಶ್ಲೀಲ ಫೋಟೊಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯ ಬಿಡುವುದಾಗಿ ಬೆದರಿಕೆ ಒಡ್ಡಿದ್ದಾರೆ ಎಂದು ಸಂತ್ರಸ್ತ ವ್ಯಕ್ತಿ ದೂರಿನಲ್ಲಿ ತಿಳಿಸಿದ್ದಾರೆ.
Kshetra Samachara
13/11/2020 10:44 am