ಬದಿಯಡ್ಕ: ಡಿಸೆಂಬರ್ 23ರಂದು ವಿವಾಹ ನಿಗದಿಯಾಗಿದ್ದ ಬದಿಯಡ್ಕ ನಿವಾಸಿಯೋರ್ವರು ಬೆಂಗಳೂರಿನಲ್ಲಿ ಅಪಘಾತ ಸಂಭವಿಸಿ ಮೃತಪಟ್ಟ ಘಟನೆ ನಡೆದಿದೆ.
ಬದಿಯಡ್ಕ ಕರಿಂಬಿಲ ನಿವಾಸಿ ಪ್ರವೀಣ್ ಕುಮಾರ್ ಪ್ರಭು (29) ಮೃತ ದುರ್ದೈವಿ. ಪ್ರವೀಣ್ ಕಳೆದ ಹತ್ತು ವರ್ಷಗಳಿಂದ ಬೆಂಗಳೂರಿನಲ್ಲಿ ಇಲೆಕ್ಟ್ರಿಕಲ್ ಸೂಪರ್ ವೈಸರ್ ಆಗಿ ಕೆಲಸ ಮಾಡುತ್ತಿದ್ದರು. ಕೆಲಸಮುಗಿಸಿ ಮನೆಗೆ ಹಿಂದಿರುಗುತ್ತಿದ್ದ ಸಂದರ್ಭ ಲಾರಿ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿತ್ತು ಎಂದು ತಿಳಿದು ಬಂದಿದೆ. ಬಳಿಕ ಸ್ಥಳೀಯರು ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾದಗೇ ಪ್ರವೀಣ್ ಮಂಗಳವಾರ ಮೃತಪಟ್ಟಿದ್ದಾರೆ.
Kshetra Samachara
02/12/2020 10:22 pm