ಬಂಟ್ವಾಳ: ಸುರೇಂದ್ರ ಬಂಟ್ವಾಳ ಹತ್ಯೆ ಪ್ರಕರಣ ಸಂಬಂಧ ಈ ವರೆಗೆ 9 ಮಂದಿ ಆರೋಪಿಗಳನ್ನು ಬಂಧಿಸಲಾಗಿದ್ದು, ಇನ್ನೂ ಮೂವರ ಬಂಧನ ಶೀಘ್ರ ಮಾಡಲಾಗುವುದು ಎಂದು ಎಸ್ಪಿ ಲಕ್ಮೀಪ್ರಸಾದ್ ತಿಳಿಸಿದ್ದಾರೆ.
ಬಂಟ್ವಾಳ ನಗರ ಪೋಲೀಸ್ ಠಾಣೆಗೆ ಆಗಮಿಸಿದ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿ, ಸುರೇಂದ್ರ ಬಂಟ್ವಾಳ ಕೊಲೆ ಪ್ರಕರಣದ ಆರೋಪಿಗಳಾದ ಸತೀಶ್ ಕುಲಾಲ್, ಗಿರೀಶ್ ಕಿನ್ನಿಗೋಳಿ, ಆಕಾಶ್ ಭವನ್ ಶರಣ್, ವೆಂಕಟೇಶ ಪೂಜಾರಿ, ಪ್ರದೀಪ್, ಶರೀಫ್, ದಿವ್ಯರಾಜ್, ರಾಜೇಶ್, ಅನಿಲ್ ಪಂಪ್‌ವೆಲ್ ಎಂಬವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿಲಾಗಿದೆ ಎಂದು ಮಾಹಿತಿ ನೀಡಿದರು.
ಆಕಾಶ್ ಭವನದ ಶರಣ್‌ನಿಗೆ ಸುರೇಂದ್ರನ ಜೊತೆ ವೈಯಕ್ತಿಕ ದ್ವೇಷ ಹಾಗೂ ಹಣದ ವಿಚಾರವಾಗಿ ವೈಮನಸ್ಸು, ದ್ವೇಷ ಇತ್ತು. ಈ ಕಾರಣದಿಂದ ಸುರೇಂದ್ರ ಬಂಟ್ವಾಳ ಹತ್ಯೆಮಾಡಲಾಗಿದ ಎಂದು ಮಾಹಿತಿ ನೀಡಿದರು.
ಪ್ರಕರಣದಲ್ಲಿ ಸತೀಶ್ ಕುಲಾಲ್ ಮತ್ತು ಗಿರೀಶ್ ಎಂಬವರು ಕೊಲೆ ಮಾಡಿದ್ದು ಉಳಿದವರು ಕೊಲೆಗೆ ಒಳಸಂಚು ನಡೆಸಿ ಕೃತ್ಯ ಮಾಡಲು ಸೂಚನೆ ನೀಡಿದ್ದರೆ ಎಂದು ಅವರು ಮಾಹಿತಿ ನೀಡಿದರು.
ಎಸ್.ಪಿ. ಲಕ್ಷ್ಮೀ ಪ್ರಸಾದ್ ಡಿ.ವೈಎಸ್.ಪಿ. ವೆಲೆಂಟೈನ್ ಡಿ.ಸೋಜ, ಮಾರ್ಗದರ್ಶನದಲ್ಲಿ, ಪ್ರಕರಣದ ತನಿಖೆಯನ್ನು ಬಂಟ್ವಾಳ ವೃತ್ತ ನಿರೀಕ್ಷಕ ಟಿ.ಡಿ. ನಾಗರಾಜ್ ಹಾಗೂ ನಾನಾ ತಾಲೂಕಿನ ವಿವಿಧ ಪೊಲೀಸ್ ಠಾಣೆಗಳ ಹಿರಿಯ ಅಧಿಕಾರಿಗಳು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
Kshetra Samachara
02/11/2020 03:19 pm