ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸಂಚಾರಿ ನಿಯಮ ಉಲ್ಲಂಘನೆ; ಒ‌ಂಬತ್ತು ತಿಂಗಳಲ್ಲಿ ₹4.31ಕೋಟಿ ದಂಡ

ಮಂಗಳೂರು- ಸಂಚಾರಿ ನಿಯಮ ಉಲ್ಲಂಘನೆ ಹಾಗೂ ಮೋಟಾರು ಕಾಯಿದೆ ಉಲ್ಲಂಘನೆ ವಿರುದ್ಧ ದಕ್ಷಿಣ ಕನ್ನಡ ಪೊಲೀಸರು ಸತತ ಕಾರ್ಯಾಚರಣೆ ನಡೆಸಿದ್ದಾರೆ‌. ಕೋವೀಡ್ ಭೀತಿ ನಡುವೆಯೂ ಕಳೆದ ಒಂಬತ್ತು ತಿಂಗಳಲ್ಲಿ 1 ಲಕ್ಷ 139 ಪ್ರಕರಣಗಳನ್ನು ದಾಖಲಿಸಿದ್ದಾರೆ. ಹಾಗೂ 4 ಕೋಟಿ 31 ಲಕ್ಷ 72 ಸಾವಿರ ರೂ. ದಂಡ ವಸೂಲಾಗಿದೆ.

ಜೊತೆಗೆ ಮಂಗಳೂರು ನಗರ ಕಮಿಷನರೇಟ್ ವ್ಯಾಪ್ತಿಯಲ್ಲಿ 9ತಿಂಗಳಲ್ಲಿ 53,898 ಪ್ರಕರಣಗಳು ದಾಖಲಾಗಿದ್ದು ಇದರಿಂದ 2 ಕೋಟಿ 29ಲಕ್ಷ 74ಸಾವಿರ 200ರೂ ದಂಡ ಸಂಗ್ರಹವಾಗಿದೆ.

ಈ ಎಲ್ಲ ನಿಯಮ ಉಲ್ಲಂಘನೆ ಪ್ರಕರಣಗಳಲ್ಲಿ ನೋ ಪಾರ್ಕಿಂಗ್ ಹಾಗೂ ನೋ ಹೆಲ್ಮೆಟ್ ಸಂಬಂಧಿಸಿದ ಪ್ರಕರಣಗಳೇ ಹೆಚ್ಚಾಗಿವೆ. ಅದರಲ್ಲಿ 6521 ಪ್ರಕರಣಗಳು ನೋ ಪಾರ್ಕಿಂಗ್ ಗೆ ಸಂಬಂಧಿಸಿದ್ದಾಗಿದೆ. ಉಳಿದಂತೆ ಸೀಟ್ ಬೆಲ್ಟ್ ಹಾಕದೇ ಪ್ರಯಾಣ 10566, ಹೆಚ್ಚುವರಿ ಪ್ರಯಾಣಿಕರ ಸಾಗಣೆ 3747, ಹಿಂಬದಿ ಸವಾರ ಹೆಲ್ಮೆಟ್ ಹಾಕದಿರುವುದು 8381, ಮತ್ತು ದಾಖಲೆ ಹಾಜರುಪಡಿಸದೇ ಇರುವುದಕ್ಕೆ 7818 ಪ್ರಕರಣಗಳು ಸೇರಿ ಇನ್ನಿತರ ನಿಯಮ ಉಲ್ಲಂಘನೆಗೆ ಪ್ರಕರಣಗಳು ದಾಖಲಾಗಿವೆ.

ಲಾಕ್ ಡೌ‌ನ್ ಸಡಿಲಿಕೆ ನಂತರದ ದಿನಗಳಲ್ಲಿ ಮೋಟಾರು ವಾಹನ ಕಾಯಿದೆ ಹಾಗೂ ಸ್ಂಚಾರಿ ನಿಯಮ ಉಲ್ಲಂಘನೆ ಕಾಯಿದೆಗಳು ಹಿಂದಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಉಲ್ಲಂಘನೆಯಾಗುತ್ತಿವೆ. ಇದರಲ್ಲಿ ಶೇಕಡಾ 55ರಷ್ಟು ಪ್ರಕರಣಗಳು ಲಾಕ್ ಡೌನ್ ತೆರವು ನಂತರ ನಡೆದಿವೆ ಎಂಬುದು ಪೊಲೀಸ್ ದಾಖಲಾತಿಗಳಿಂದ ತಿಳಿದು ಬಂದಿದೆ.

Edited By : Nagaraj Tulugeri
Kshetra Samachara

Kshetra Samachara

26/10/2020 11:45 am

Cinque Terre

15.57 K

Cinque Terre

3

ಸಂಬಂಧಿತ ಸುದ್ದಿ