ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶ್ರೀಗಂಧ ಚೋರ ಸೆರೆ; ಪರಾರಿಯಾದ ಮೂವರಿಗಾಗಿ ಮುಂದುವರಿದ ಶೋಧ

ಸಾಗರ: ತಾಲೂಕಿನ ಆನಂದಪುರಂ ಹೋಬಳಿಯ ಇರುವಕ್ಕಿ ಕೃಷಿ ಮತ್ತು ತೋಟಗಾರಿಕೆ ವಿವಿ ಬಳಿ ಶುಕ್ರವಾರ ಅರಣ್ಯ ಇಲಾಖೆ ಅಧಿಕಾರಿ, ಸಿಬ್ಬಂದಿಯು ಓರ್ವ ಶ್ರೀಗಂಧ ಕಳ್ಳನನ್ನು ಶನಿವಾರ ಬಂಧಿಸಿದ್ದು, ಮೂವರು ಪರಾರಿಯಾಗಿದ್ದಾರೆ.

ಬಂಧಿತನನ್ನು ಸರಗುಂದ ಗ್ರಾಮದ ಹರೀಶ್ ಎಂಬವನಾಗಿದ್ದು, ಈತನೊಂದಿಗೆ ಇದ್ದ ಶರತ್, ಪುನೀತ್, ಚಂದ್ರಶೇಖರ್ ಪರಾರಿಯಾಗಿದ್ದಾರೆ. ಅವರಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.

ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದ ಅರಣ್ಯ ಇಲಾಖೆ ಸಿಬ್ಬಂದಿ, ಮೂರು ಕೆ.ಜಿ. ಗಂಧದ ತುಂಡು ಹಾಗೂ ಒಂದು ಬೈಕ್ ವಶಪಡಿಸಿದ್ದಾರೆ.

ಆನಂದಪುರಂ ವಲಯದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ರಾಜೇಶ್ ನಾಯ್ಕ ಮಾರ್ಗದರ್ಶನದಲ್ಲಿ ನಡೆದ ದಾಳಿಯಲ್ಲಿ ಉಪ ವಲಯ ಅರಣ್ಯಾಧಿಕಾರಿಗಳಾದ ಭದ್ರೇಶ್, ಪ್ರದೀಶ್, ಅರಣ್ಯ ವೀಕ್ಷಕರಾದ ಸತೀಶ್, ರಮೇಶ್ ಪಾಲ್ಗೊಂಡಿದ್ದರು.

Edited By : Nirmala Aralikatti
Kshetra Samachara

Kshetra Samachara

17/10/2020 10:37 pm

Cinque Terre

8.43 K

Cinque Terre

0

ಸಂಬಂಧಿತ ಸುದ್ದಿ