ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶನಿ ದೇವರ ಖಜಾನೆಗೆ ಕನ್ನ ಹಾಕಿದ್ದ ಇಬ್ಬರು ಅಂದರ್

ಶಿವಮೊಗ್ಗ: ಇಲ್ಲಿನ ಆರ್.ಎಂ.ಎಲ್. ನಗರದಲ್ಲಿ ಶನಿ ಮಹಾತ್ಮ ದೇವಸ್ಥಾನಕ್ಕೆ ಕನ್ನ ಹಾಕಿದ್ದ ಇಬ್ಬರನ್ನು ದೊಡ್ಡಪೇಟೆ ಠಾಣೆ ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ಇನ್ನಿಬ್ಬರು ಆರೋಪಿಗಳಿಗಾಗಿ ಶೋಧ ಕಾರ್ಯ ಮುಂದುವರಿದೆ. ಬುದ್ಧ ನಗರದ ವಸೀಮ್ ಅಕ್ರಂ (19), ರಾಗಿಗುಡ್ಡ ನಿವಾಸಿ ಮೊಹಮ್ಮದ್ ಕರೀಂ (19) ಬಂಧಿತರು. ಇವರಿಬ್ಬರು ಹಣ್ಣಿನ ವ್ಯಾಪಾರಿಗಳು ಎಂದು ಪೊಲೀಸರು ತಿಳಿಸಿದ್ದಾರೆ.

ದೇವಸ್ಥಾನದ ಶಟರ್ ಮುರಿದು ಕಾಣಿಕೆ ಹುಂಡಿಯಲ್ಲಿದ್ದ 15 ಸಾವಿರ ರೂ., ಗರ್ಭಗುಡಿಯ ಬೀರುವಿನಲ್ಲಿದ್ದ 5 ಸಾವಿರ ಮೌಲ್ಯದ ಬೆಳ್ಳಿಯ ಸಾಮಗ್ರಿ ಕಳವು ಮಾಡಿದ್ದರು. ಈ ಸಂಬಂಧ ದೊಡ್ಡಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಕಾರ್ಯಾಚರಣೆ ನಡೆಸಿ ಪೊಲೀಸರು ಗುರುವಾರ ಇಬ್ಬರನ್ನೂ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Edited By : Vijay Kumar
Kshetra Samachara

Kshetra Samachara

15/10/2020 11:42 pm

Cinque Terre

8.09 K

Cinque Terre

0

ಸಂಬಂಧಿತ ಸುದ್ದಿ