ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದರೋಡೆಗೆ ಹೊಂಚು: ನಾಲ್ವರು ಅಂತಾರಾಜ್ಯ ದರೋಡೆಕೋರರ ಸೆರೆ- ದೊಡ್ಡಪೇಟೆ ಪೊಲೀಸರ ಮಿಂಚಿನ ಕಾರ್ಯಾಚರಣೆ

ಶಿವಮೊಗ್ಗ: ದರೋಡೆಗೆ ಹೊಂಚು ಹಾಕುತ್ತಿದ್ದ ನಾಲ್ವರು ಅಂತಾರಾಜ್ಯ ದರೋಡೆಕೋರರನ್ನು ದೊಡ್ಡಪೇಟೆ ಠಾಣೆ ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.

ಬಂಧಿತರಿಂದ 1 ಪಿಸ್ತೂಲ್, ಪಿಸ್ತೂಲ್ 4 ಸಜೀವ ಗುಂಡುಗಳು, 1 ಚಾಕು, 4 ಮೊಬೈಲ್ ಹಾಗೂ ಕೃತ್ಯಕ್ಕೆ ಬಳಸಿದ್ದ 1 ಸ್ಯಾಂಟ್ರೊ ಕಾರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಬಂಧಿತರನ್ನು ಮಧ್ಯಪ್ರದೇಶದ ಮೂರೆನ್ ಜಿಲ್ಲೆಯ ಸುರೇಶ್ ಸಿಂಗ್ (20), ಬೆಂಡ್ ಜಿಲ್ಲೆಯ ಕಮಲ್ ಸಿಂಗ್ (34), ರಾಜಸ್ಥಾನ ಜಾಲೂರು ಜಿಲ್ಲೆಯ ರಣವೀರ್ ಸಿಂಗ್( 34), ಶಿರೋಯಿ ಜಿಲ್ಲೆಯ ರಾಮಲಾಲ್(21) ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ

ದೊಡ್ಡಪೇಟೆ ಠಾಣೆ ವ್ಯಾಪ್ತಿಯ ನಗರದ ಗಾಂಧಿ ಬಜಾರ್‌ನ ಹತ್ತಿರ ದರೋಡೆಗೆ ಸಜ್ಜಾಗಿರುವ ಬಗ್ಗೆ ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿದ ಪೊಲೀಸರು, ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಗಳನ್ನು ನ್ಯಾಯಾಧೀಶರ ಮುಂದೆ ಹಾಜರು ಪಡಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Edited By : Vijay Kumar
Kshetra Samachara

Kshetra Samachara

15/10/2020 08:57 pm

Cinque Terre

15.14 K

Cinque Terre

0

ಸಂಬಂಧಿತ ಸುದ್ದಿ