ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾಸರಗೋಡು: ಶ್ರೀಗಂಧ ಕೊರಡು ಸಾಗಾಟ ಪ್ರಕರಣ; ಪ್ರಮುಖ ಆರೋಪಿ ಅಂದರ್

ಕಾಸರಗೋಡು: ಜಿಲ್ಲಾಧಿಕಾರಿ ಮನೆ ಸಮೀಪದ ಮನೆಯೊಂದರಲ್ಲಿದ್ದ ಶ್ರೀಗಂಧ ವಶಕ್ಕೆ ಪಡೆದ ಪ್ರಕರಣದ ಪ್ರಮುಖ ಆರೋಪಿಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಶುಕ್ರವಾರ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಧಿತನನ್ನು ನಾಯಮ್ಮರ ಮೂಲೆಯ ವಿ.ಅಬ್ದುಲ್ ಖಾದರ್(60) ಎಂದು ಗುರುತಿಸಲಾಗಿದ್ದು, ಉಳಿದ ಆರೋಪಿಗಳಿಗಾಗಿ ಪೊಲೀಸರು ಶೋಧ ಮುಂದುವರಿಸಿದ್ದಾರೆ. ಇಬ್ರಾಹಿಂ ಹರ್ಷದ್ ಹಾಗೂ ಲಾರಿ ಚಾಲಕ ತಲೆ ಮರೆಸಿಕೊಂಡಿದ್ದಾರೆ.

ಅ. 6ರಂದು ಜಿಲ್ಲಾಧಿಕಾರಿ ನಿವಾಸದ ಬಳಿ ಸಿಮೆಂಟ್ ಸಾಗಾಟ ಲಾರಿಯಲ್ಲಿ ಪ್ರತ್ಯೇಕ ಕ್ಯಾಬಿನ್ ಮಾಡಿ 2.5 ಕೋಟಿ ರೂ. ಮೌಲ್ಯದ ಶ್ರೀಗಂಧ ಸಾಗಾಟಕ್ಕೆ ಯತ್ನಿಸಲಾಗಿತ್ತು.

ಈ ವೇಳೆ ಜಿಲ್ಲಾಧಿಕಾರಿಯವರು ಅನುಮಾನಗೊಂಡು ದಾಳಿ ಮಾಡಿದಾಗ ಪ್ರಕರಣ ಬೆಳಕಿಗೆ ಬಂದಿತ್ತು.

Edited By : Nirmala Aralikatti
Kshetra Samachara

Kshetra Samachara

09/10/2020 10:46 pm

Cinque Terre

9.7 K

Cinque Terre

0

ಸಂಬಂಧಿತ ಸುದ್ದಿ