ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ: ಮುಡಿಪು ಇನ್ಫೋಸಿಸ್ ಕಟ್ಟಡದಲ್ಲಿ ಮುಲ್ಕಿ ಯುವಕ ಅನುಮಾನಾಸ್ಪದ ಸಾವು

ಮುಲ್ಕಿ: ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ಮುಡಿಪು ಇನ್ಪೋಸಿಸ್ ಕಟ್ಟಡದಲ್ಲಿ ಪ್ಲಂಬರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಮುಲ್ಕಿಯ ಕಿಲ್ಪಾಡಿ ಯುವಕ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ.

ಮೃತ ಯುವಕನನ್ನು ಮುಲ್ಕಿ ಕಿಲ್ಪಾಡಿ ಎಣ್ಣೆಗೇಣಿ ಬಳಿಯನಿವಾಸಿ ರಾಜೇಶ್ ದೇವಾಡಿಗ (32 )ಎಂದು ಗುರುತಿಸಲಾಗಿದೆ.

ಮೃತ ಯುವಕ ರಾಜೇಶ್ ಕಳೆದ ಎಂಟು ವರ್ಷಗಳಿಂದ ಇನ್ಫೋಸಿಸ್ ಕಂಪನಿಯಲ್ಲಿ ಪ್ಲಂಬರ್ ಕೆಲಸ ನಿರ್ವಹಿಸುತ್ತಿದ್ದು ಮಂಗಳವಾರ ಸಂಜೆ ಕಂಪನಿಯ ಬಹುಮಹಡಿ ಕಟ್ಟಡದ ಮೇಲಿನ ಮಹಡಿಗೆ ಕೆಲಸಕ್ಕೆಂದು ಸಹೋದ್ಯೋಗಿಗಳು ಕರೆದಿದ್ದಾರೆ. ಬಳಿಕ ಈತನ ಮೊಬೈಲ್ ಸ್ವಿಚ್ ಆಫ್ ಆಗಿದೆ.

ಬುಧವಾರ ಬೆಳಗಿನ ಜಾವ ರಾಜೇಶನ ಮೃತದೇಹ ಇನ್ಫೋಸಿಸ್ ಕಟ್ಟಡದ ಆವರಣದಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಪತ್ತೆಯಾಗಿದೆ.

ಕಂಪನಿಯ ಸಿಸಿ ಕೆಮರಾ ಪರಿಶೀಲಿಸಿದಾಗ ಕಟ್ಟಡದ ಗ್ರೌಂಡ್ ಫ್ಲೋರ್ ನಲ್ಲಿ ಲಿಫ್ಟ್ ಕಡೆಗೆ ಕಾರ್ಯದ ನಿಮಿತ್ತ ಹೋಗುತ್ತಿರುವುದು ಕಂಡುಬಂದಿದ್ದು ಕೋಣಾಜೆ ಪೊಲೀಸರು ಹಾಗೂ ಕಿಲ್ಪಾಡಿ ಗ್ರಾಪಂ ಉಪಾಧ್ಯಕ್ಷ ಗೋಪಿನಾಥ ಪಡಂಗ ಸ್ಥಳಕ್ಕೆ ಧಾವಿಸಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Edited By : PublicNext Desk
Kshetra Samachara

Kshetra Samachara

16/02/2022 04:42 pm

Cinque Terre

3.8 K

Cinque Terre

0

ಸಂಬಂಧಿತ ಸುದ್ದಿ