ಬಂಟ್ವಾಳ: ಬಂಟ್ವಾಳ ತಾಲೂಕಿನ ಕಲ್ಲಡ್ಕ ಸುತ್ತಮುತ್ತ ಒಂದೇ ದಿನ ಮೂರು ಅಪಘಾತಗಳು ಸಂಭವಿಸಿದ್ದು, ಎರಡು ಪ್ರತ್ಯೇಕ ಘಟನೆಗಳಲ್ಲಿ ಇಬ್ಬರು ಮೃತಪಟ್ಟಿದ್ದಾರೆ.
ಬೆಳಗ್ಗೆ ಟ್ಯಾಂಕರ್ ಲಾರಿ ಮತ್ತು ದ್ವಿಚಕ್ರ ವಾಹನ ನಡುವೆ ಅಪಘಾತ ಸಂಭವಿಸಿತ್ತು.
ಈ ಅಪಘಾತದಲ್ಲಿ ಸ್ಥಳೀಯ ನಿವಾಸಿ ಮಹಮ್ಮದ್ ಇಮಾದ್ ಮೃತಪಟ್ಟರೆ, ರಾತ್ರಿ ನಡೆದ ಅಪಘಾತದಲ್ಲಿ ಬಾಯಿಲ ನಿವಾಸಿ ಮಂಜುನಾಥ್ ಮೃತಪಟ್ಟರು.
ಕಲ್ಲಡ್ಕ ಜಂಕ್ಷನ್ ನಲ್ಲಿ ಬೆಳಗ್ಗೆ 9.30ಕ್ಕೆ ಟ್ಯಾಂಕರ್ ಲಾರಿ- ಆ್ಯಕ್ಟಿವಾ ನಡುವೆ ಅಪಘಾತ ನಡೆದಿದೆ. ಘಟನೆಯಲ್ಲಿ ಮಹಮ್ಮದ್ ಇಮಾದ್ ಎಂಬವರು ಸ್ಥಳದಲ್ಲೇ ಮೃತಪಟ್ಟರು. ಬಳಿಕ ಮತ್ತೊಂದು ಅಪಘಾತ ಸಂಭವಿಸಿತು. ಆದರೆ, ಯಾರಿಗೂ ಗಾಯವಾಗಿಲ್ಲ. ಬಳಿಕ ಅಲ್ಲಿ ಬ್ಯಾರಿಕೇಡ್ ಹಾಕಲಾಯಿತು. ಸಂಜೆ 6.45 ಕ್ಕೆ ಕಲ್ಲಡ್ಕ ಸಮೀಪ ಕುದ್ರೆಬೆಟ್ಟು ಎಂಬಲ್ಲಿ ಬೈಕ್ ಮತ್ತು ಎರಡು ಕಾರುಗಳ ಮಧ್ಯೆ ಅಪಘಾತ ಸಂಭವಿಸಿದೆ. ಈ ಘಟನೆಯಲ್ಲಿ ಮಂಜುನಾಥ ಸಾವನ್ನಪ್ಪಿದರು.
ಕಲ್ಲಡ್ಕದಿಂದ ಮನೆ ಕಡೆ ದ್ವಿಚಕ್ರ ವಾಹನದಲ್ಲಿ ಬರುತ್ತಿದ್ದ ವೇಳೆ ಕುದ್ರೆಬೆಟ್ಟಿನಲ್ಲಿ ಕಾರು ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ. ಕೂಡಲೇ ಅವರನ್ನು ತುಂಬೆ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಅಲ್ಲಿ ಅವರು ಮೃತಪಟ್ಟಿರುವುದಾಗಿ ತಿಳಿಸಲಾಯಿತು.
Kshetra Samachara
07/02/2021 09:10 pm