ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾರವಾರ: ಬೋಟ್ ನಿಂದ ಆಯ ತಪ್ಪಿ ಸಮುದ್ರಕ್ಕೆ ಬಿದ್ದು ಮೀನುಗಾರ ಸಾವು

ಕಾರವಾರ: ಇಲ್ಲಿನ ಆಳ ಸಮುದ್ರದಲ್ಲಿ ಯಾಂತ್ರೀಕೃತ ಬೋಟ್ ಮೂಲಕ ಮೀನುಗಾರಿಕೆ ಮಾಡಿ ವಾಪಸ್ ಬೈತಖೋಲ್ ಬಂದರಿಗೆ ಬಂದಾಗ ಆಯ ತಪ್ಪಿ ಮೀನುಗಾರರೊಬ್ಬರು ಸಮುದ್ರದಲ್ಲಿ ಬಿದ್ದು ಮೃತಪಟ್ಟ ಘಟನೆ ಶನಿವಾರ ನಡೆದಿದೆ. ತಾಲೂಕಿನ ಅಳಿಯಬಾವಳದ ಶಶಾಂಕ ಸಾವಳೋ ಕುರ್ಲೆ (39) ಮೃತಪಟ್ಟ ಮೀನುಗಾರ. ಶನಿವಾರ ಮಧ್ಯಾಹ್ನ ಆಳ ಸಮುದ್ರದಲ್ಲಿ ಮೀನುಗಾರಿಕೆ ನಡೆಸಿ ವಾಪಸಾದ ಬೋಟ್, ಬೈತಖೋಲ್ ಬಂದರಿಗೆ ಬರುತ್ತಿದ್ದಂತೆಯೇ ಶಶಾಂಕ ನಿಯಂತ್ರಣ ತಪ್ಪಿ ಸಮುದ್ರದಲ್ಲಿ ಬಿದ್ದು ನಾಪತ್ತೆಯಾಗಿದ್ದರು.

ಈ ಬೋಟ್ ನಲ್ಲಿ 20ಕ್ಕೂ ಹೆಚ್ಚು ಜನರಿದ್ದರು. ಕರಾವಳಿ ಕಾವಲು ಪಡೆ, ಅಗ್ನಿಶಾಮಕ ದಳ ಹಾಗೂ ಪೊಲೀಸರು ತೀವ್ರ ಶೋಧ ಕಾರ್ಯ ನಡೆಸಿದರೂ ಶಶಾಂಕ್ ಪತ್ತೆಯಾಗಿರಲಿಲ್ಲ. ಆದರೂ ಶೋಧ ಕಾರ್ಯ ಮುಂದುವರಿಸಲಾಗಿತ್ತು. ಸಂಜೆ ವೇಳೆ ಶಶಾಂಕ ಮೃತದೇಹ ಪತ್ತೆಯಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದ್ದಾರೆ.

Edited By : Nagaraj Tulugeri
Kshetra Samachara

Kshetra Samachara

10/01/2021 06:21 pm

Cinque Terre

16.5 K

Cinque Terre

0

ಸಂಬಂಧಿತ ಸುದ್ದಿ