ಕಡಬ: ಕಾಡಾನೆ ಅಟ್ಟಾಡಿಸಿದ ಪರಿಣಾಮ ವ್ಯಕ್ತಿಯೋರ್ವರು ಕುಸಿದು ಬಿದ್ದು ಗಾಯಗೊಂಡ ಘಟನೆ ಕಡಬ ತಾಲೂಕಿನ ಪೇರಡ್ಕ ಸಮೀಪದ ಮೀನಾಡಿ ಎಂಬಲ್ಲಿ ನಡೆದಿದೆ.
ಸೋಮವಾರ ಮೀನಾಡಿ ನಿವಾಸಿ ಶೌಕತ್ತಾಲಿ ಮುಸ್ಲಿಯಾರ್ ಎಂಬವರು ತನ್ನ ಬೈಕ್ ನಲ್ಲಿ ಕಡಬ ಕಡೆಗೆ ಹೊರಟವರು ರಸ್ತೆಗೆ ತಲುಪಿದ ಕೂಡಲೇ ಕಾಡಾನೆಯನ್ನು ಕಂಡು ಬೈಕನ್ನು ನಿಲ್ಲಿಸಿದ್ದಾರೆ.
ಈ ಸಂದರ್ಭ ಅವರನ್ನು ಅಟ್ಟಿಸಿಕೊಂಡು ಬಂದ ಕಾಡಾನೆ, ಬೈಕನ್ನು ತುಳಿದು ಹಾನಿಗೊಳಿಸಿದೆ.
ಆನೆಯಿಂದ ತಪ್ಪಿಸಿಕೊಳ್ಳುವ ಭರದಲ್ಲಿ ಶೌಕತ್ತಾಲಿಯವರು ಕುಸಿದು ಬಿದ್ದು ಗಾಯಗೊಂಡಿದ್ದಾರೆ.
ಸೋಮವಾರ ಸಂಜೆಯಾಗುತ್ತಿದ್ದಂತೆಯೇ ಆನೆಯ ಘರ್ಜನೆ ಕೇಳ ತೊಡಗಿದ್ದು, ಸ್ಥಳೀಯ ನಿವಾಸಿಗಳು ಭಯಭೀತಿಯಿಂದಲೇ ರಾತ್ರಿ ಕಳೆಯಬೇಕಾದ ಅನಿವಾರ್ಯತೆ ಎದುರಾಗಿತ್ತು.
ಸ್ಥಳಕ್ಕೆ ಅರಣ್ಯ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ.
Kshetra Samachara
29/12/2020 12:41 pm