ಮುಲ್ಕಿ: ರಾಷ್ಟ್ರೀಯ ಹೆದ್ದಾರಿ 66ರ ಮಂಗಳೂರು ಉಡುಪಿ ಕಡೆಗೆ ಹೋಗುವ ಮುಲ್ಕಿಯ ಕೊಕ್ಕರಕಲ್ಲು ಬಳಿ ಹೆದ್ದಾರಿ ಕುಸಿದಿದ್ದು, ಅಪಾಯಕಾರಿ ಪರಿಸ್ಥಿತಿ ಉದ್ಭವಿಸಿದೆ.
ಮುಲ್ಕಿ ಸಮೀಪದ ಕೊಕ್ಕರ ಕಲ್ಲು ಬಳಿ ರಾಷ್ಟ್ರೀಯ ಹೆದ್ದಾರಿ ಕುಸಿದು ಭಾರಿ ಗಾತ್ರದ ಹೊಂಡ ಉಂಟಾಗಿದೆ.
ಗುರುವಾರ ಬೆಳಗಿನಿಂದಲೇ ಹೆದ್ದಾರಿ ಕುಸಿತ ಕಂಡಿದ್ದು, ಸ್ಥಳಕ್ಕೆ ಹೆದ್ದಾರಿ ಇಲಾಖೆಯ ಅಧಿಕಾರಿಗಳು ಧಾವಿಸಿದ್ದಾರೆ.
ಅಸಮರ್ಪಕ ಒಳಚರಂಡಿ ಕಾಮಗಾರಿ ಹೆದ್ದಾರಿ ಕುಸಿತಕ್ಕೆ ಕಾರಣ ಎಂದು ಶಂಕಿಸಲಾಗಿದೆ. ಹೆದ್ದಾರಿ ಅಗಲೀಕರಣದ ವೇಳೆ ಕಳಪೆ ಕಾಮಗಾರಿ ಎಂದು ಅಂದಾಜಿಸಲಾಗಿದೆ.
ಬೆಳಗಿನಿಂದಲೇ ಹೊಂಡ ಕುಸಿಯುತ್ತಾ ಬಂದಿದ್ದು, ಮಂಗಳೂರಿನಿಂದ ಉಡುಪಿ ಕಡೆಗೆ ಹೋಗುವ ರಾಷ್ಟ್ರೀಯ ಹೆದ್ದಾರಿಯ ಒಂದು ಭಾಗ ಸಂಪೂರ್ಣ ಸ್ಥಗಿತಗೊಳ್ಳುವ ಭೀತಿಯಲ್ಲಿದ್ದು, ಬಾರಿ ಘನವಾಹನಗಳು ಸಂಚರಿಸಿದರೆ ಮತ್ತಷ್ಟು ಅಪಾಯ ಎದುರಾಗುವ ಸಾಧ್ಯತೆ ಇದೆ.
ಸ್ಥಳಕ್ಕೆ ಪಡುಪಣಂಬೂರು ಪಂಚಾಯತ್ ಮಾಜಿ ಅಧ್ಯಕ್ಷ ವಿನೋದ್ ಸಾಲ್ಯಾನ್ ಭೇಟಿ ನೀಡಿ ಪರಿಶೀಲಿಸಿದ್ದು, ಕೂಡಲೇ ಹೆದ್ದಾರಿಯನ್ನು ಏಕಮುಖ ಸಂಚಾರವನ್ನಾಗಿ ಮಾಡಬೇಕೆಂದು ಒತ್ತಾಯಿಸಿದ್ದಾರೆ.
Kshetra Samachara
24/09/2020 10:49 am