ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ: ಹೆದ್ದಾರಿ ಬದಿ ಕಾಂಕ್ರೀಟ್ ಮಿಕ್ಸಿಂಗ್ ಮೆಷಿನ್ ಅನಾಥ!; ಅಪಘಾತ ಭೀತಿ

ಮುಲ್ಕಿ: ಮುಲ್ಕಿ -ಕಿನ್ನಿಗೋಳಿ ರಾಜ್ಯ ಹೆದ್ದಾರಿಯ ಅಂಗರಗುಡ್ಡೆ ಬಳಿ ಕಳೆದ ನಾಲ್ಕು ದಿನಗಳಿಂದ ಕಾಂಕ್ರೀಟ್ ಮಿಕ್ಸಿಂಗ್ ಮೆಷಿನ್ ನನ್ನು ಅದರ ಮಾಲೀಕ ಬಿಟ್ಟುಹೋಗಿದ್ದು, ಅಪಾಯಕಾರಿಯಾಗಿ ಪರಿಣಮಿಸಿದೆ ಎಂದು ಸ್ಥಳೀಯರು ದೂರಿದ್ದಾರೆ.

ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮಾಲೀಕರ ಗಮನ ಸೆಳೆಯಲಾಗಿದೆ.

ಸಾಮಾಜಿಕ ಜಾಲತಾಣದಲ್ಲಿ "ನನ್ನ ಯಜಮಾನರು ನನ್ನ ಕಾಲು ಮುರಿದಿರುವ ಕಾರಣಕ್ಕೆ ನನ್ನನ್ನು ಅಂಗರಗುಡ್ಡೆ ಬಸ್ ನಿಲ್ದಾಣದ ಬಳಿ ಸುಮಾರು 4 ದಿನದಿಂದ ಬಿಟ್ಟು ಹೋಗಿದ್ದಾರೆ.

ನನ್ನನ್ನು ದುಡಿಯುವ ಸಮಯದಲ್ಲಿ ದುಡಿಸಿ, ಈಗ ನನ್ನ ಕಾಲು ಮುರಿದ ಒಂದೇ ಕಾರಣಕ್ಕೆ ಇಲ್ಲಿ ಇರಬೇಕಾಗಿದೆ.

ರಾತ್ರಿ ಚಲಿಸುವ ವಾಹನ ಎಲ್ಲಿ ನನ್ನ ಮೇಲೆ ಮಂದ ಬೆಳಕಿನಲ್ಲಿ ಅಪ್ಪಲಿಸುವ ಭಯದಲ್ಲಿ ನಾನು ಇದ್ದೇನೆ.

ಹಬ್ಬದ ದಿನವಾದರೂ ನನ್ನನ್ನು ಮನೆಗೆ ಮುಟ್ಟಿಸುವ ಜವಾಬ್ದಾರಿ ನಿಮ್ಮ ಮೇಲಿದೆ" ಎಂದು ವೈರಲ್ ಆಗಿದ್ದು, ಅಪಾಯ ಸಂಭವಿಸುವ ಮೊದಲು ಈ ಕಾಂಕ್ರೀಟ್ ಮಿಕ್ಸ್ ಮೆಷಿನ್ ನ್ನು ಸ್ಥಳದಿಂದ ತೆರವುಗೊಳಿಸಬೇಕೆಂದು ನಾಗರಿಕರು ಆಗ್ರಹಿಸಿದ್ದಾರೆ.

Edited By : Nirmala Aralikatti
Kshetra Samachara

Kshetra Samachara

14/11/2020 08:49 am

Cinque Terre

8.98 K

Cinque Terre

1

ಸಂಬಂಧಿತ ಸುದ್ದಿ