ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಳಸ: ಜಲಪಾತದ ಹೊಂಡದಲ್ಲಿ ಈಜಲು ಹೋಗಿ ತರುಣ ಮೃತ್ಯು

ಕಳಸ: ಇಲ್ಲಿಗೆ ಸಮೀಪದ ಅಬ್ಬುಗುಡಿಗೆ ಗ್ರಾಮದ ಸುರುಮನೆ ಜಲಪಾತದ ನೀರಿನಲ್ಲಿ ಈಜಲು ಹೋದ ತರುಣನೊಬ್ಬ ಹೊಂಡದ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಶನಿವಾರ ನಡೆದಿದೆ.

ಹೋಬಳಿಯ ಸಂಸೆ ಗ್ರಾಪಂ ವ್ಯಾಪ್ತಿಯ ಗುತ್ಯಡ್ಕ ಗ್ರಾಮದ ನಿವಾಸಿ ವಂಶಿತ್(16) ಮೃತ ತರುಣನಾಗಿದ್ದು, ಈತ ಶನಿವಾರ ಮಧ್ಯಾಹ್ನ ತನ್ನ ನಾಲ್ವರು ಸ್ನೇಹಿತರೊಂದಿಗೆ ಸುರುಮನೆ ಫಾಲ್ಸ್ ನೋಡಲು ತೆರಳಿದ್ದ.

ಈ ವೇಳೆ ಜಲಪಾತದ ಬಳಿ ಇರುವ ನೀರಿನ ಹೊಂಡಕ್ಕಿಳಿದು ಸ್ನಾನ ಮಾಡಲು ಮುಂದಾಗಿದ್ದಾರೆ.

ಹೀಗೆ ನಾಲ್ವರು ಈಜಾಡುತ್ತಿದ್ದಾಗ ವಂಶಿತ್ ಹೊಂಡದ ಆಳ ಅರಿಯದೆ ನೀರಿನ ಸೆಳೆತಕ್ಕೆ ಸಿಲುಕಿ ಮೃತಪಟ್ಟಿದ್ದಾನೆ.

Edited By : Nirmala Aralikatti
Kshetra Samachara

Kshetra Samachara

31/10/2020 08:34 pm

Cinque Terre

14.81 K

Cinque Terre

4

ಸಂಬಂಧಿತ ಸುದ್ದಿ