ಮಂಡ್ಯ: ಫಿಟ್‌ನೆಸ್ ಕ್ಲಬ್ ಎಂಬ ಹೆಸರಿನ ಜಿಮ್ ಉದ್ಘಾಟನೆಗೆ ರೋಡ್ ಬ್ಲಾಕ್ ಮಾಡಿದ ಪರಿಣಾಮ ರೋಗಿ ಇದ್ದ ಆ್ಯಂಬುಲೆನ್ಸ್ ಒಂದು ಸುಮಾರು ಹೊತ್ತು ದಾರಿಗಾಗಿ ಕಾಯ್ದು ನಂತರ ವಾಪಸ್ ಹೋದ ಘಟನೆ ಮಂಡ್ಯ ಅಶೋಕ್ ನಗರ ಅರ್ಚನಾ ಆಸ್ಪತ್ರೆ ಬಳಿ ನಡೆದಿದೆ.
ಆಸ್ಪತ್ರೆಯ ಬಳಿ ನೂತನವಾಗಿ ಪ್ರಾರಂಭಿಸಲಾಗಿರುವ ಫಿಟ್‌ನೆಸ್ ಕ್ಲಬ್ ಜಿಮ್ ಉದ್ಘಾಟನೆ ಸಂಜೆ ವೇಳೆ ನಡೆದಿತ್ತು. ಅದಕ್ಕಾಗಿ ಬಂದಿದ್ದವರ ಕಾರುಗಳನ್ನು ರಸ್ತೆಯಲ್ಲಿ ಅಡ್ಡಾದಿಡ್ಡಿಯಾಗಿ ನಿಲ್ಲಿಸಲಾಗಿತ್ತು. ಇದೇ ಸಮಯದಲ್ಲಿರೋಗಿಯನ್ನ ಕರೆದುಕೊಂಡು ಹೋಗುತ್ತಿದ್ದ ಆ್ಯಂಬುಲೆನ್ಸ್ ಹಾರನ್ ಮಾಡುತ್ತಾ ಬಂದು ನಿಂತರೂ ಯಾರೂ ಕ್ಯಾರೆ ಅನ್ನಲಿಲ್ಲ. ಕೆಲ ಕಾಲ ಕಾದು ಸಾಕಾದ ಅ್ಯಂಬುಲೆನ್ಸ್ ಚಾಲಕ ಬೇರೆ ಮಾರ್ಗ ಇಲ್ಲದೇ ಅ್ಯಂಬುಲೆನ್ಸ್ ಹಿಂದಕ್ಕೆ ತೆಗೆದುಕೊಂಡು ಹೊಗಬೇಕಾಯಿತು.
ಆಮೇಲೆ ಸ್ಥಳಕ್ಕೆ ಬಂದ ಪಿಎಸ್‌ಐ ಒಬ್ಬರು ಮೂಕಪ್ರೇಕ್ಷರಂತೆ ನಿಂತರೆ ಹೊರತು ದಾರಿ ತೆರವು ಮಾಡುವ ಕೆಲಸ ಮಾಡಲೇ ಇಲ್ಲ.
PublicNext
05/10/2024 12:10 pm