", "articleSection": "Lifestyle,Entertainment,Cinema,News,Public News", "image": { "@type": "ImageObject", "url": "https://prod.cdn.publicnext.com/s3fs-public/421698-1737702569-A3~1.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "Umesh Mangalore" }, "editor": { "@type": "Person", "name": "suman.k" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಮಂಗಳೂರು: ಕನ್ನಡದ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 11ರ ಸ್ಪರ್ಧಿ ಧನರಾಜ್ ಆಚಾರ್ಯ ನಿನ್ನೆ ಸಂಜೆ ಹುಟ್ಟೂರು ಪುತ್ತೂರಿಗೆ ಆಗಮಿಸಿದ್ದಾರೆ. ಮೊದಲ...Read more" } ", "keywords": "Dhanaraj BBK11, Bigg Boss Kannada 11, Dhanaraj elimination, Kannada TV show, reality TV series, Colors Kannada, Kiccha Sudeep, Dhanaraj journey, Bigg Boss Kannada season 11, Dhanaraj interview.,,Lifestyle,Entertainment,Cinema,News,Public-News", "url": "https://publicnext.com/article/nid/Lifestyle/Entertainment/Cinema/News/Public-News" }
ಮಂಗಳೂರು: ಕನ್ನಡದ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 11ರ ಸ್ಪರ್ಧಿ ಧನರಾಜ್ ಆಚಾರ್ಯ ನಿನ್ನೆ ಸಂಜೆ ಹುಟ್ಟೂರು ಪುತ್ತೂರಿಗೆ ಆಗಮಿಸಿದ್ದಾರೆ. ಮೊದಲಿಗೆ ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು. ಖಾಸಗಿ ವಾಹಿನಿಯ ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಸುಮಾರು 16 ವಾರಗಳ ಕಾಲ ಉಳಿದುಕೊಂಡು ಕೊನೆಯ ಹಂತದಲ್ಲಿ ಹೊರಬಂದಿದ್ದರು. ಬಹಳಷ್ಟು ಅಭಿಮಾನಿಗಳನ್ನ ತನ್ನ ಡೈಲಾಗ್‌ಗಳ ಮೂಲಕವೇ ಮನರಂಜಿಸುತ್ತಿದ್ದರು.
ಬಿಗ್ ಬಾಸ್ ಮನೆಯಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಅವರ ಡೈಲಾಗ್ ಹೇಳಿ ಎಲ್ಲಾ ಸ್ಪರ್ಧಿಗಳ ಮನಸ್ಸನ್ನು ಗೆದ್ದುಕೊಂಡಿದ್ದರು. ವೀಕ್ಷಕರ ಮನಸ್ಸನ್ನೂ ಗೆದ್ದುಕೊಂಡು 16ನೇ ವಾರದವರೆಗೆ ಬಿಗ್‌ಬಾಸ್ ಮನೆಯಲ್ಲಿ ಉಳಿದುಕೊಂಡಿದ್ದರು. ತಮಗೆ ಅನಿಸಿದ್ದನ್ನು ನೇರವಾಗಿ ಹೇಳುವ ಮೂಲಕ 'ಕಿಚ್ಚ' ಸುದೀಪ್ ಅವರ ಚಪ್ಪಾಳೆ ಕೂಡ ಗಿಟ್ಟಿಸಿಕೊಂಡಿದ್ದರು. ಧನರಾಜ್ ಅವರು ಆಸೆ ಪಟ್ಟಂತೆ ಅವರ ಕುಟುಂಬಸ್ಥರು, ಮುಖ್ಯವಾಗಿ ಅವರ ಮಗಳು ಕೂಡ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟು ಖುಷಿಯನ್ನು ದುಪ್ಪಟ್ಟು ಮಾಡಿದ್ದರು.
ಜೊತೆಗೆ ಬಿಗ್ ಬಾಸ್ ಮನೆಯಲ್ಲಿ 'ದೋಸ್ತಾ ಹಂಗೆ ಆಯ್ತು ಮೋಸ್ತಾ' ಅಂತ ಹನುಮಂತ ಅವರ ಜೊತೆಗೆ ಓಡಾಡಿಕೊಂಡಿದ್ದ ಧನರಾಜ್ ಆಚಾರ್ಯ ಬಿಗ್ ಬಾಸ್ ಮನೆಯಿಂದ ಆಚೆ ಬಂದ ಬಳಿಕ ನೇರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ಬಳಿಕ ಅನಂತಾಡಿ ಕೊಡಾಜೆಯ ತನ್ನ ಮನೆಗೆ ತೆರಳಿದ್ದಾರೆ.
ಧನರಾಜ್ ಅವರನ್ನ ಪುತ್ತೂರು ಮಹಾಲಿಂಗೇಶ್ವರ ದೇವಳದ ವ್ಯವಸ್ಥಾಪನಾ ಸಮಿತಿ ಅಭಿನಂದಿಸಿದರು. ಈ ಸಂದರ್ಭ ಧನ್ ರಾಜ್ ಆಚಾರ್ಯ ಅವರ ತಂದೆ, ಸಹೋದರಿ ಮತ್ತು ಚಿಕ್ಕಪ್ಪ ಮತ್ತು ಅವರ ಆಪ್ತ ಬಳಗದವರು ಜೊತೆಗಿದ್ದರು.
ಇನ್ನು ಬಿಗ್ ಬಾಸ್ ನಿಂದ ಹೊರಬಂದ ಬಳಿಕ ಹಲವಾರು ಆಫರ್ ಗಳು ಹೊರಬಂದಿವೆ ಅಂತ ಮಾಧ್ಯಮಕ್ಕೆ ಹೇಳಿಕೆ ನೀಡಿದರು. ಸಿನೆಮಾ ಸೇರಿದಂತೆ ಧಾರಾವಾಹಿ ಹಾಗೂ ರಿಯಾಲಿಟಿ ಶೋಗಳಿಂದ ಈಗಾಗ್ಲೇ ಆಫರ್‌ಗಳು ಲಭಿಸಿವೆ ಎಂದರು.
ಇನ್ನು ಬಿಗ್ ಬಾಸ್ ಅಂತಿಮ ಹಂತದಲ್ಲಿದ್ದು 'ನಮ್ ದೋಸ್ತ್' ಹನುಮಂತ ಗೆಲ್ತಾನೆ ಅನ್ನೋ ನಂಬಿಕೆ ಇದೆ ಅಂತ ಪುನರುಚ್ಚರಿಸಿದರು.
PublicNext
24/01/2025 12:39 pm