ಸಮಂತಾ ಮಾಜಿ ಪತಿ ನಾಗಚೈತನ್ಯ ಮನೆಯಲ್ಲಿ ಮದುವೆ ಸಂಭ್ರಮ ಮನೆ ಮಾಡಿದೆ. ಹೆಣ್ಣಿನ ಮನೆಯಲ್ಲಿ ಮದುವೆ ಶಾಸ್ತ್ರ ಶುರು ಆಗಿದೆ. ಸಂಭ್ರಮದ ಸುಂದರ ಫೋಟೋಗಳನ್ನು ನಾಗಚೈತನ್ಯ ಭಾವಿ ಪತ್ನಿ ಶೋಭಿತಾ ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ನಾಗಚೈತನ್ಯ ಅವರ 2ನೇ ಮದುವೆ ಯಾವಾಗ ಎಂದು ಗುಟ್ಟು ಬಿಟ್ಟು ಕೊಡದೆ ಸೈಲೆಂಟ್ ಮದುವೆ ಶಾಸ್ತ್ರಗಳನ್ನು ಶುರು ಮಾಡಿದ್ದಾರೆ. ಸದ್ದಿಲ್ಲದೆ ಹೆಣ್ಣಿನ ಮನೆಯಲ್ಲಿ ಮದುವೆ ಶಾಸ್ತ್ರ ಜರುಗಿದೆ. ಕೆಂಪು ಬಣ್ಣದ ಸೀರೆಯುಟ್ಟು ನಗುತ್ತಾ ಅರಿಶಿಣವನ್ನು ಕಟ್ಟುವ ಶಾಸ್ತ್ರದಲ್ಲಿ ಶೋಭಿತಾ ಕಾಣಿಸಿಕೊಂಡಿದ್ದಾರೆ.
ಅಂದಹಾಗೆ, ಆಗಸ್ಟ್ 8ರಂದು ನಾಗಚೈತನ್ಯ ಅವರು ಶೋಭಿತಾ ಜೊತೆ ತಮ್ಮ ನಿವಾಸದಲ್ಲಿ ಸರಳವಾಗಿ ನಿಶ್ಚಿತಾರ್ಥ ಆದರು. ಈ ಸಂಭ್ರಮದ ವಿಚಾರವನ್ನು ನಾಗರ್ಜುನ ಸೋಶಿಯಲ್ ಮೀಡಿಯಾದಲ್ಲಿ ಅನೌನ್ಸ್ ಮಾಡಿದರು.
PublicNext
21/10/2024 07:24 pm