ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪಿಂಕ್ ಬಣ್ಣದ ಬೇಬಿ ಬಂಪ್ ಫೋಟೋದಲ್ಲಿ ಮಿಂಚಿದ ರೆಬೆಲ್ ಸ್ಟಾರ್ ಸೊಸೆ

ಬೆಂಗಳೂರು: ರೆಬೆಲ್ ಸ್ಟಾರ್ ಅಂಬರೀಶ್ ಪುತ್ರ ಅಭಿಷೇಕ್ ಅವರು ತಂದೆಯಾಗುತ್ತಿರುವ ಸಂಭ್ರಮದಲ್ಲಿದ್ದಾರೆ. ಪುಟ್ಟ ಕಂದಮ್ಮನ ಆಗಮನಕ್ಕಾಗಿ ಮನೆ ಮಂದಿ ಕಾಯುತ್ತ ಇದ್ದಾರೆ. ಈ ನಡುವೆ ಅಭಿಷೇಕ್ ಪತ್ನಿ ಅವಿವ ಬೇಬಿ ಬಂಪ್ ಫೋಟೋ ಹಂಚಿಕೊಂಡಿದ್ದಾರೆ.

ತಾಯ್ತನದ ಕಳೆ ಅವಿವಳ ಮುಖದಲ್ಲಿ ಎದ್ದು ಕಾಣುತ್ತಿದೆ. ಪಿಂಕ್ ಬಣ್ಣದ ಸೀರೆಯುಟ್ಟು ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ನಟಿಯ ಬೇಬಿ ಬಂಪ್ ಫೋಟೋಗೆ ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದಾರೆ.

ಕಳೆದ ತಿಂಗಳು ಅವಿವಗೆ ಸೀಮಂತ ಶಾಸ್ತ್ರ ಮಾಡಲಾಯಿತು. ಹಸಿರು ಬಣ್ಣದ ಸೀರೆಯುಟ್ಟು ಅಭಿಷೇಕ್ ಪತ್ನಿ ಮುದ್ದಾಗಿ ಕಾಣಿಸಿಕೊಂಡಿದ್ದರು. ಇವಾಗ ಪಿಂಕ್ ಬಣ್ಣದ ಸಾರಿಯಲ್ಲಿ ಮಿಂಚುತ್ತಿದ್ದಾರೆ. ಇದೀಗ ಅಭಿಮಾನಿಗಳೆಲ್ಲ ಜ್ಯೂ. ರೆಬೆಲ್ ಸ್ಟಾರ್ ಬರುವಿಕೆಯ ನಿರೀಕ್ಷೆಯಲ್ಲಿದ್ದಾರೆ.

Edited By : Suman K
PublicNext

PublicNext

16/10/2024 04:29 pm

Cinque Terre

41.45 K

Cinque Terre

0

ಸಂಬಂಧಿತ ಸುದ್ದಿ