ಬೆಂಗಳೂರು: ಬೆಂಗಳೂರು ಏ16 ವಿಶ್ವವಿಖ್ಯಾತ ಬೆಂಗಳೂರು ಕರಗ ಮಹೋತ್ಸವಕ್ಕೆ ಕ್ಷಣಗಣನೆ ಆರಂಭವಾಗಿದೆ. ಚೈತ್ರಪೂರ್ಣಿಮೆಯ ದಿನವಾದ ಇಂದು ಮಧ್ಯರಾತ್ರಿ ತಿಗಳರಪೇಟೆಯ ಐತಿಹಾಸಿಕ ಧರ್ಮರಾಯಸ್ವಾಮು ದೇವಸ್ಥಾನದಿಂದ ಕರಗ ಉತ್ಸವ ಹೊರಡಲಿದ್ದು ಹಳೇ ಬೆಂಗಳೂರು ಭಾಗಗಳಲ್ಲಿ ಸಂಚರಿಸಲಿದೆ.ಕೋವಿಡ್ ಕಾರಣದಿಂದ ಕಳೆದ ಎರಡುವರ್ಷಗಳಿಂದ ಕರಗಕೇವಲ ದೇವಸ್ಥಾನಕ್ಕೆ ಮಾತ್ರ ಸೀಮಿತವಾಗಿ ನಡೆದಿತ್ತು. ಹಾಗಾಗಿ ಈ ಬಾರಿ ಅತ್ಯಂತ ವಿಜ್ರಂಭಣೆಯಿಂದ ಉತ್ಸವ ನಡೆಸಲು ಸಕಲ ಸಿದ್ಧತೆಗಳನ್ನೂ ಮಾಡಿಕೊಳ್ಳಲಾಗಿದೆ. ಅತೀ ಹೆಚ್ಚು ಜನ ಭಾಗವಹಿಸುವ ನಿರೀಕ್ಷೆ ಇದ್ದು ಬಿಗಿಬಂದೋಬಸ್ತ್ ಏರ್ಪಡಿಸಲಾಗಿದೆ.ಜ್ಞಾನೇಂದ್ರ ಅವರು ಸತತ 11 ನೇ ಬಾರಿ ಕರಗವನ್ನು ಹೋರುತ್ತಿದ್ದು ಧೀಕ್ಷಾ ಬದ್ಧರಾಗಿ ಧಾರ್ಮಿಕ ಪೂಜಾವಿಧಿವದಾನ ನೆರವೇರಿಸುತ್ತಿದ್ದಾರೆ.. ಕರಗಶಕ್ತ್ಯೋತ್ಸವದ ಕುರಿತು ನಮ್ಮ ಪ್ರತಿನಿಧಿ ಪ್ರವೀಣ್ ರಾವ್ ನೀಡಿರುವ ವರದಿ ಇಲ್ಲಿದೆ...
PublicNext
16/04/2022 06:12 pm