ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಿರಿಯನೊಂದಿಗೆ ಡೇಟಿಂಗ್ ಮಾಡೋದು ಅಪರಾಧವೆಂಬಂತೆ ಬಿಂಬಿಸಲಾಗುತ್ತಿದೆ: ಮಲೈಕಾ

ಮುಂಬೈ: ವಿಚ್ಛೇದನ ಅಥವಾ ಲವ್ ಬ್ರೇಕ್‌ಅಪ್ ನಂತರವೂ ಮಹಿಳೆಗೆ ತನ್ನದೇ ಅದ ಬದುಕು ಇರುತ್ತದೆ‌. ಈ ನಡುವೆ ಆಕೆ ತನಗಿಂತ ಕಿರಿಯ ಪುರುಷನನ್ನು ಪ್ರೇಮಿಸಿದರೆ ಅದು ಅಪರಾಧ ಎಂಬಂತೆ ಬಿಂಬಿಸಲಾಗುತ್ತಿದೆ ಎಂದು ನಟಿ ಮಲೈಕ ಅರೋರಾ ಹೇಳಿದ್ದಾರೆ.

ಬದುಕಿನ‌ ಪ್ರತಿ ಹಂತಗಳಲ್ಲೂ ನಾನು ಗಟ್ಟಿಯಾಗಿ ನಿಂತುಕೊಳ್ಳಲು ಬಯಸುತ್ತೇನೆ. ನನ್ನ ಆರೋಗ್ಯ ಹಾಗೂ ಸಂತೋಷಕ್ಕಾಗಿ ದುಡಿಯುತ್ತೇನೆ. ನನ್ನ ತಾಯಿಗಿದ್ದ ಶಕ್ತಿ ಮತ್ತು ಧೈರ್ಯವನ್ನು ತುಂಬಿಕೊಂಡಿದ್ದೇನೆ. ಆಕೆಯ ಜೀವನವನ್ನು ಪ್ರತಿಬಿಂಬಿಸುತ್ತೇ‌ನೆ. ನನ್ನ ತಾಯಿ ನನಗೆ ಸ್ವತಂತ್ರವಾಗಿ ಯೋಚಿಸಲು ಹಾಗೂ ಬದುಕಲು ಹೇಳಿಕೊಟ್ಟಿದ್ದಾಳೆ ಎಂದು ಮಲೈಕಾ ಹೇಳಿದ್ದಾರೆ.

Edited By : Nagaraj Tulugeri
PublicNext

PublicNext

22/04/2022 07:05 pm

Cinque Terre

139.63 K

Cinque Terre

18