ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗಡ್ಡ ಬಿಟ್ಟರೆಂಬ ಕಾರಣಕ್ಕೆ ಎಸ್ ಐ ಅಮಾನತು

ಲಕ್ನೋ (ಉತ್ತರ ಪ್ರದೇಶ)- ಗಡ್ಡ ಬಿಟ್ಟಿದ್ದಾರೆಂಬ ಕಾರಣಕ್ಕೆ ಎಸ್ ಐ ಒಬ್ಬರನ್ನು ಉತ್ತರ ಪ್ರದೇಶ ಸರ್ಕಾರ ಅಮಾನತ್ತು ಮಾಡಿದೆ‌. ಸಬ್ ಇನ್ಸ್ಪೆಕ್ಟರ್ ಆಗಿರುವ ಇಂತೇಸರ್ ಅವರು ಪೊಲೀಸ್ ನಿಯಮಗಳನ್ನು ಮೀರಿ ಗಡ್ಡ ಬೆಳೆಸಿದ್ದಾರೆಂಬ ಆರೋಪ ಇದೆ.

ಪೊಲೀಸ್ ನಿಯಮಗಳ ಪ್ರಕಾರ ಸಿಖ್ ಧರ್ಮೀಯ ಪೊಲೀಸರು ಮಾತ್ರ ಗಡ್ಡ ಬೆಳೆಸಲು ಅನುಮತಿ ಇದೆ. ಆದ್ರೆ ಇತರರು ಗಡ್ಡ ಬೆಳೆಸಲು ಪೂರ್ವಾನುಮತಿ ಪಡೆಯಬೇಕು. ಈ ಬಗ್ಗೆ ಎಸ್ ಐ ಇಂತೇಸರ್ ಅವರಿಗೆ ಹಲವಾರು ಬಾರಿ ಎಚ್ಚರಿಕೆ ನೀಡಲಾಗಿತ್ತು. ಆದರೂ ಅವರು ಇಲಾಖೆಯ ಅನುಮತಿ ಪಡೆದಿರಲಿಲ್ಲ‌ ಎಂದು ಎಸ್ ಪಿ ಅಭಿಷೇಕ್ ಸಿಂಗ್ ಹೇಳಿದ್ದಾರೆ.‌

ಇಂತೇಸರ್ ಅಲಿ ಅವರು ಕಳೆದ ಮೂರು ವರ್ಷಗಳಿಂದ ಉತ್ತರ ಪ್ರದೇಶದ ಬಾಘ್ವತ್ ಎಂಬಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

Edited By : Nagaraj Tulugeri
PublicNext

PublicNext

22/10/2020 04:46 pm

Cinque Terre

25.5 K

Cinque Terre

4