ಗದಗ: ಇನ್ನೇನು ಗಣೇಶನ ಹಬ್ಬ ಬಂದೇ ಬಿಡ್ತು. ಏಕದಂತನ ಹಬ್ಬ ಶಾಂತಿಯುತವಾಗಿ ಸಾಗಬೇಕು ಅಂತ, ಗದಗದ ತೋಂಟದಾರ್ಯ ಮಂಟಪದಲ್ಲಿ ಸರ್ವ ಧರ್ಮೀಯರ ಶಾಂತಿ ಸಭೆ ಕರೆಯಲಾಗಿತ್ತು. ಡಿಸಿ ವೈಶಾಲಿ ಎಮ್.ಎಲ್ ಹಾಗೂ ಎಸ್ಪಿ ದೇವರಾಜು ನೇತೃತ್ವದಲ್ಲಿ ನಡೆದ ಸಭೆಗೆ ಅವಳಿ ನಗರದ ಅನೇಕ ಸಮಾಜ ಮುಖಂಡರು ಭಾಗಿಯಾಗಿದ್ರು.
ಗದಗ ಜಿಲ್ಲೆ ಕೋಮುಸೌಹಾರ್ದತೆಗೆ ಹೆಸರುವಾಸಿಯಾದ ಜಿಲ್ಲೆ. ಆದ್ರೆ ಧರ್ಮ ದಂಗಲ್ ನ ಈ ವೇಳೆ ಕೋಮು ಕದಡದಂತೆ ಜನ ಜಾಗರೂಕತೆಯಿಂದ ಇರಬೇಕು ಅಂತ ಅಧಿಕಾರಿಗಳು ಖಡಕ್ ಎಚ್ಚರಿಕೆ ನೀಡಿದ್ರು. ಭದ್ರತೆ, ಕಾನೂನು ಸುವ್ಯವಸ್ಥೆ ಕಾಪಾಡುವ ಹಿತದೃಷ್ಟಿಯಿಂದ ಗಣೇಶ ಹಬ್ಬವನ್ನು 9 ದಿನದವರೆಗೆ ಆಚರಣೆ ಮಾಡಿದ್ರೆ ಒಳ್ಳೆಯದು. ಡಿಜೆ ಹಾಗೂ ಸೌಂಡ್ ಸಿಸ್ಟಮ್ ಬಳಸಬಹುದು. ಆದ್ರೆ ಸರ್ಕಾರದ ನಿಯಮದಂತೆ ಯಾವ ಪ್ರದೇಶದಲ್ಲಿ ಎಷ್ಟು ಡೆಸಿಬಲ್ ಬಳಸಬೇಕು ಅಷ್ಟನ್ನು ಮಾತ್ರ ಬಳಸಬೇಕು. ಗಣೇಶ ಪೆಂಡಾಲ್ ಹಾಗೂ ಮೆರವಣಿಗೆ ವೇಳೆ ಅಹಿತಕರ ಘಟನೆಗಳು ನಡೆದ್ರೆ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಜರುಗಿಸುವ ಎಚ್ಚರಿಕೆ ನೀಡಿದ್ದಾರೆ ಎಸ್.ಪಿ ಶಿವಪ್ರಕಾಶ್.
ವಿಘ್ನ ನಿವಾರಕನ ಹಬ್ಬದಲ್ಲಿ ಯಾವುದೇ ಉದ್ವಿಗ್ನತೆ ಎದುರಾಗದಂತೆ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಸನ್ನದ್ಧವಾಗ್ತಿದೆ. ಈ ವರ್ಷ ಗಣೇಶ ಉತ್ಸವ ಕಮಿಟಿಯವರಿಗೆ ಪರವಾನಗಿ ಕಡ್ಡಾಯವಾಗಿದ್ದು, ನಗರಸಭೆಯಲ್ಲಿ ಏಕಗವಾಕ್ಷಿ ಯೋಜನೆ ಜಾರಿಗೊಳಿಸಲಾಗಿದೆ. ಒಟ್ಟಾರೆ ಸಾಲು ಸಾಲು ವಿವಾದಗಳ ನಡುವೆ ಆಯಾ ಜಿಲ್ಲಾಡಳಿತಗಳಿಗೆ ಹಬ್ಬಗಳನ್ನ ದಾಟಿಸೋದು ದೊಡ್ಡ ತಲೆನೋವಾಗಿರೋದಂತು ಸತ್ಯ.
PublicNext
25/08/2022 08:15 pm