ಹೊಸದಿಲ್ಲಿ : ಉತ್ತರ ಪ್ರದೇಶದ ಕಾನ್ಪುರ ಹಾಗೂ ಪ್ರಯಾಗ್ ರಾಜ್ ದಲ್ಲಿ ಹಿಂಸಾಚಾರ, ಸಾರ್ವಜನಿಕ ಆಸ್ತಿಪಾಸ್ತಿ ಧ್ವಂಸ ಮಾಡಿ ಒದೆ ತಿಂದು ಜೈಲು ಸೇರಿರುವ ಅಮಾಯಕರಿಗೆ...ಪಾಪ ಬೇಲ್ ಪಡೆಯಲೂ ಹಣವಿಲ್ಲವಂತೆ.
ಈ ರೀತಿ ನೊಂದು ಹೇಳಿದವರು ಬೇರೆ ಯಾರೂ ಅಲ್ಲ. ದಿಲ್ಲಿ ಜಾಮಾ ಮಸೀದಿ ಇಮಾಮ್ ಸೈಯದ್ ಅಹಮ್ಮದ್ ಬುಕಾರಿ.
ಇಂದಿನ ಶುಕ್ರವಾರದ ಪ್ರಾರ್ಥನೆ ನಂತರ ಎಲ್ಲ ಮುಸ್ಲಿಂ ಬಾಂಧವರಲ್ಲಿ ಮನವಿ ಮಾಡಿಕೊಂಡಿರುವ ಬುಕಾರಿ, ಪ್ರಚೋದನೆಗೊಳಗಾಗಿ ಕಾನೂನನ್ನು ಕೈಗೆ ತೆಗೆದುಕೊಳ್ಳಬೇಡಿ. ಸಮಾಜ ಘಾತುಕರು ದೇಶದಲ್ಲಿ ಅರಾಜಕತೆ ಸೃಷ್ಟಿಸಲು ಸಂಚು ರೂಪಿಸಿದ್ದಾರೆ. ಅಂತಹ ಮೇಲೆ ನಿಗಾ ಇಡಿ.
ಕಲ್ಲು ತೂರಾಟ ನಿಯಂತ್ರಿಸಲು ಪೊಲೀಸರು ಕ್ರಮಕೈಗೊಳ್ಳಬೇಕಾಯಿತು. ಇಬ್ಬರು ಮೃತಪಟ್ಟು ಪೊಲೀಸರು ಸೇರಿದಂತೆ ನೂರಾರು ಜನ ಗಾಯಗೊಂಡಿದ್ದಾರೆ. ಕೆಲವರು ಆಸ್ಪತ್ರೆ ಸೇರಿದ್ದರೆ ಬಹುತೇಕ ಜನ ಜೈಲು ಸೇರಿದ್ದಾರೆ. ಅವರಲ್ಲಿ ಹೆಚ್ಚು ಜನ ಬಡವರು, ಈಗ ಜಾಮೀನು ಪಡೆಯಲು ಅವರ ಬಳಿ ಹಣವಿಲ್ಲ. ಇಂತಹ ಕೃತ್ಯ ನಡೆಸುವ ಮೊದಲು ಸ್ವಲ್ಪ ಯೋಚಿಸಬೇಕು ಎಂದು ಬುದ್ಧಿವಾದ ಹೇಳಿದ್ದಾರೆ.
PublicNext
17/06/2022 01:21 pm