ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬ್ರೇಕಿಂಗ್: ಹಿಜಾಬ್ ಅರ್ಜಿ ವಿಚಾರಣೆ ಸೋಮವಾರಕ್ಕೆ ಮುಂದೂಡಿಕೆ

ಬೆಂಗಳೂರು: ಹಿಜಾಬ್ ವಿವಾದ ಕುರಿತಂತೆ ಇಂದು (ಶುಕ್ರವಾರ) ಕೂಡ ವಿಚಾರಣೆ ನಡೆಸಿದ ಹೈಕೋರ್ಟ್ ತ್ರಿಸದಸ್ಯ ಪೀಠವು ವಿಚಾರಣೆಯನ್ನು ಮತ್ತೆ ಸೋಮವಾರ (ಫೆ.21) ಮಧ್ಯಾಹ್ನ 2:30ಕ್ಕೆ ಮುಂದೂಡಿದೆ.

ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ತಿ, ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಮತ್ತು ನ್ಯಾಯಮೂರ್ತಿ ಜೆ.ಎಂ. ಖಾಜಿ ಅವರನ್ನೊಳಗೊಂಡ ತ್ರಿಸದಸ್ಯ ಪೀಠವು ಇಂದು ವಿಚಾರಣೆ ನಡೆಸಿತು. ಆದರೆ ತ್ರಿಸದಸ್ಯ ಪೀಠವು ವಿಚಾರಣೆಯನ್ನು ಸೋಮವಾರಕ್ಕೆ ಮುಂದೂಡಿದೆ.

ರಾಜ್ಯ ಸರ್ಕಾರದ ಪರ ಅಡ್ವೊಕೇಟ್ ಜನರಲ್ ಪ್ರಭುಲಿಂಗ ನಾವಡಗಿ ಅವರು ಇಂದು ವಾದ ಮಂಡಿಸಿದರು. 'ನಾನು ಅರ್ಥಮಾಡಿಕೊಂಡಂತೆ ವಿವಾದವು ಮೂರು ವಿಭಾಗಗಳಲ್ಲಿ ಬರುತ್ತದೆ. ಮೊದಲನೆಯದಾಗಿ 2022ರ ಜನವರಿ 5ರಂದು ನೀಡಿದ ಆದೇಶ. ಈ ಆದೇಶವು ಶಿಕ್ಷಣ ಕಾಯಿದೆಗೆ ಅನುಗುಣವಾಗಿದೆ ಎಂಬುದು ನನ್ನ ಮೊದಲ ವಾದವಾಗಿದೆ. ಎರಡನೆಯದು, ಸಂವಿಧಾನದ 25ನೇ ವಿಧಿಯಡಿ ಹಿಜಾಬ್ ಧರಿಸುವುದು ಇಸ್ಲಾಂನ ಅಗತ್ಯ ಆಚರಣೆಗೆ ಸಂಬಂಧಿಸಿದೆ. ಹಿಜಾಬ್ ಧರಿಸುವುದು ಇಸ್ಲಾಮಿನ ಅಗತ್ಯ ಧಾರ್ಮಿಕ ಆಚರಣೆಯೊಳಗೆ ಬರುವುದಿಲ್ಲ ಎಂಬ ನಿಲುವು ನಾವು ತೆಗೆದುಕೊಂಡಿದ್ದೇವೆ. ಮೂರನೆಯದು, ಹಿಜಾಬ್ ಧರಿಸುವ ಹಕ್ಕನ್ನು 19(1)(ಎ) ವಿಧಿಯಲ್ಲಿ ಗುರುತಿಸಬಹುದು ಮತ್ತು ಅದನ್ನು ತಡೆಗಟ್ಟುವುದು 19(1)(ಎ) ರ ಉಲ್ಲಂಘನೆ ಎಂಬ ವಾದವಿದೆ. ಅರ್ಜಿದಾರರ ವಾದದಂತೆ ಇದು 19(1)(ಎ) ರ ಉಲ್ಲಂಘನೆಯಲ್ಲ ಎಂದು ಪ್ರಭುಲಿಂಗ ನಾವಡಗಿ ವಾದ ಮಂಡಿಸಿದರು.

ವಾದವನ್ನು ಆಲಿಸಿದ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ತಿ ಅವರ ನೇತೃತ್ವದ ತ್ರಿಸದಸ್ಯ ಪೀಠವು ವಿಚಾರಣೆಯನ್ನು ಸೋಮವಾರಕ್ಕೆ ಮುಂದೂಡಿದೆ. ಹೀಗಾಗಿ ಅಡ್ವೊಕೇಟ್ ಜನರಲ್ ಪ್ರಭುಲಿಂಗ ನಾವಡಗಿ ಅವರು ಸೋಮವಾರ ಕೂಡ ವಾದ ಮಂಡನೆ ಮಾಡಲಿದ್ದಾರೆ.

Edited By : Vijay Kumar
PublicNext

PublicNext

18/02/2022 04:45 pm

Cinque Terre

30.43 K

Cinque Terre

7

ಸಂಬಂಧಿತ ಸುದ್ದಿ