ಕೋಲ್ಕೊತ್ತಾ: ದುಪಟ್ಟಾ ಹಿಡಿದೆಳೆದು ಮದುವೆಗೆ ಒತ್ತಾಯಿಸಿದ್ರೇ ಅದು ಲೈಂಗಿಕ ಕಿರುಕುಳ ಆಗೋದಿಲ್ಲ. ಇಂತಹ ಕೇಸ್ ಗಳು ಪೋಸ್ಕೋ ಕಾಯ್ದೆ ಅಡಿಗೂ ಬರೋದಿಲ್ಲ ಎಂದು ಕೊಲ್ಕತ್ತಾ ಹೈಕೋರ್ಟ್ ಆದೇಶ ನೀಡಿದೆ.
ನ್ಯಾಯಮೂರ್ತಿ ವಿವೇಕ್ ಚೌಧರಿ ಅವರನ್ನೊಳಗೊಂಡ ವಿಭಾಗೀಯ ಪೀಠ ಈ ಆದೇಶ ನೀಡಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸೆಷೆನ್ಸ್ ನ್ಯಾಯಲಯ ನೀಡಿದ್ದ ತೀರ್ಪನ್ನ ರದ್ದುಗೊಳಿಸಿದೆ.
2017 ರ ಅಗಸ್ಟ್ ನಲ್ಲಿ ಬಾಲಕಿಯೊಬ್ಬಳು ಶಾಲೆಯಿಂದ ಮನೆಗೆ ಬರುತ್ತಿದ್ದಳು.ಆಗ ಯುವಕನೊಬ್ಬ ಬಾಲಕಿಯ ದುಪ್ಪಟ್ಟಾ ಹಿಡಿದು ಎಳೆದು ಮದುವೆಗೂ ಒತ್ತಾಯಿಸಿದ್ದ.ಮದುವೆ ಆಗದೇ ಇದ್ದರೆ ಆ್ಯಸಿಡ್ ಹಾಕೋದಾಗಿಯೂ ಬೆದರಿಸಿದ್ದ.
ಇದನ್ನ ಆಧರಿಸಿಯೇ ಸೆಷನ್ಸ್ ನ್ಯಾಯಾಲಯ ಆರೋಪಿಗೆ ಶಿಕ್ಷೆ ವಿಧಿಸಿತ್ತು.ಆದರೆ ಇದನ್ನ ಪ್ರಶ್ನಿಸಿ ಆರೋಪಿ ಹೈಕೋರ್ಟ್ ಗೆ ಹೋಗಿದ್ದ. ಈ ಪ್ರಕರಣ ವಿಚಾರಣೆ ನಡೆಸಿರೋ ಹೈಕೋರ್ಟ್, ಸೆಷನ್ಸ್ ನ್ಯಾಯಾಲಯ ಪರಿಗಣಿಸಿದ್ದ ಪೋಕ್ಸೊ ಕಾಯ್ದೆಯನ್ನ ಕೈಬಿಟ್ಟಿದೆ. ಆದರೆ ಭಾರತೀಯ ದಂಡ ಸಂಹಿತೆ 354 (1)(ii) ಮತ್ತು 506 ರ ಅನ್ವಯ ಸೆಷನ್ಸ್ ನ್ಯಾಯಾಲಯ ವಿಧಿಸಿದ್ದ ಶಿಕ್ಷೆಯನ್ನ ಪರಿಗಣಿಸಬಹುದಾಗಿದೆ ಅಂತಲೇ ಹೇಳಿದೆ.
PublicNext
02/12/2021 07:33 pm