ಮುಂಬೈ : ಮುಂಬೈ ನ ಕ್ರೂಸ್ ಡ್ರಗ್ಸ್ ಪ್ರಕರಣದಲ್ಲಿ ಆರ್ಯನ್ ಖಾನ್ ಮತ್ತು ಇತರರನ್ನು ಬಂಧ ಮುಕ್ತಗೊಳಿಸಲು 25 ಕೋಟಿ ರೂಪಾಯಿ ಲಂಚ ಕೇಳಿದ ಆರೋಪ ಎನ್ ಸಿಬಿ ಮುಂಬೈ ನ ವಿಭಾಗೀಯ ನಿರ್ದೇಶಕ ಸಮೀರ್ ವಾಂಖೆಡೆ ವಿರುದ್ಧ ಕೇಳಿಬಂದಿದೆ.
ಕ್ರೂಸ್ ಡ್ರಗ್ಸ್ ಪ್ರಕರಣದ ಮುಖ್ಯ ಸಾಕ್ಷಿಯಿಂದ ಈ ಸುಲಿಗೆ ಆರೋಪ ಕೇಳಿಬಂದಿದೆ.
ಈ ನಡುವೆ ಎನ್ ಸಿಪಿ ನಾಯಕ ನವಾಬ್ ಮಲ್ಲಿಕ್ ಸೋಶಿಯಲ್ ಮೀಡಿಯಾದಲ್ಲಿ ಆರೋಪವೊಂದನ್ನು ಮಾಡಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಸಮೀರ್ ವಾಂಖೆಡೆ , ನಾನು ಬಹು ಧರ್ಮೀಯ ಸಂಸ್ಕೃತಿಗೆ ಸೇರಿದವನು ಎಂಬುವುದನ್ನು ಹೇಳಲು ಬಯಸುತ್ತೇನೆ. ನನ್ನ ತಂದೆ ಹಿಂದು ತಾಯಿ ಮುಸ್ಲಿಂ ಸಮುದಾಯಕ್ಕೆ ಸೇರಿದವರು. ಸೋಶಿಯಲ್ ಮೀಡಿಯಾದಲ್ಲಿನನ್ನ ವೈಯಕ್ತಿಕ ವಿಚಾರ ಹಂಚುವುದು ಮಾನನಷ್ಟವಾಗುತ್ತದೆ ನೆನಪಿರಲಿ ಎಂದು ತಿರುಗೇಟು ಕೊಟ್ಟಿದ್ದಾರೆ.
ಎನ್ ಸಿಪಿ ನಾಯಕ ನವಾಬ್ ಮಲ್ಲಿಕ್ ಅವರ ಮಾತುಗಳಿಂದ ಕೆಂಡಾಮಂಡಲವಾದ ಸಮೀರ್ ಇಂಥದ್ದೊಂದು ಹೇಳಿಕೆ ನೀಡುವುದರ ಜತೆಗೆ ಎಚ್ಚರಿಕೆ ನೀಡಿದ್ದಾರೆ ಬಾಲಿವುಡ್ ನಲ್ಲಿ ಸುಶಾಂತ್ ಸಿಂಗ್ ರಜಪೂತ್ ಸಾವಿನ ನಂತರ ಒಂದೆಲ್ಲ ಒಂದು ಕಾರಣಕ್ಕೆ ಡ್ರಗ್ಸ್ ಸುದ್ದಿಯಾಗುತ್ತಲೇ ಇದೆ.
PublicNext
26/10/2021 12:07 pm