ಮುಂಬೈ: ಭೀಮಾ ಕೊರೆಗಾಂವ್ ಪ್ರಕರಣಕ್ಕೆ ಸಂಬಂಧಿಸಿ ಬಂಧನಕ್ಕೊಳಗಾಗಿದ್ದ ಖ್ಯಾತ ಕವಿ ಹಾಗೂ ಸಾಮಾಜಿಕ ಹೋರಾಟಗಾರ ವರವರರಾವ್ ರವರಿಗೆ ಬಾಂಬೆ ಹೈಕೋರ್ಟ್ ಜಾಮೀನು ನೀಡಿದೆ. 2017 ಡಿಸೆಂಬರ್ 31 ರಂದು ಪುಣೆಯ ಎಲ್ಗರ್ ಸಮಾವೇಶ ನಡೆದ ಭೀಮಾ ಕೊರೆಗಾಂವ್ ಹಿಂಸಾಚಾರಕ್ಕೆ ಸಂಬಂಧಿಸಿದಂತೆ 82 ವರ್ಷದ ವರವರ ರಾವ್ ಆರೋಪಿ ಆಗಿದ್ದರು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು 9 ಹೋರಾಟಗಾರರನ್ನು ಪೊಲೀಸರು ಬಂಧಿಸಿದ್ದರು.ಇನ್ನು ವಿಚಾರಣೆಗಾಗಿ ಕಾಯುತ್ತಿದ್ದ ಅವರು ಆಗಸ್ಟ್ 28, 2018 ರಿಂದ ಬಂಧನದಲ್ಲಿದ್ದರು.
ಸದ್ಯ, ಬಾಂಬೆ ಹೈಕೋರ್ಟ್ ಅವರ ಆರೋಗ್ಯ ಸ್ಥಿತಿಯನ್ನು ಪರಿಗಣಿಸಿ ಜಾಮೀನು ನೀಡಿದೆ. ಮುಂಬೈನಲ್ಲೇ ಉಳಿಯುವಂತೆ ಹಾಗೂ ವಿಚಾರಣೆಗೆ ಲಭ್ಯವಿರುವಂತೆ ಅವರಿಗೆ ಸೂಚಿಸಲಾಗಿದೆ.
PublicNext
22/02/2021 01:53 pm