ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸಾರ್ವಜನಿಕವಾಗಿ ಗನ್ ಒಯ್ಯುವುದು ಮೂಲಭೂತ ಹಕ್ಕು: ಯುಎಸ್ ಸುಪ್ರೀಂ

ವಾಷಿಂಗ್ಟನ್ : ಪ್ರತಿಯೊಂದು ದೇಶದಲ್ಲಿಯೂ ಅವರದ್ದೇ ಆದ ಸಂವಿಧಾನವಿರುತ್ತದೆ. ಆ ಸಂವಿಧಾನದ ಬದ್ದವಾಗಿ ಅಲ್ಲಿನ ಜನ ಕೆಲವು ಹಕ್ಕು ಹೊಂದಿರುತ್ತಾರೆ. ಸದ್ಯ ಅಮೆರಿಕಾದಲ್ಲಿ ಸಾರ್ವಜನಿಕವಾಗಿ ಗನ್ ಒಯ್ಯುವುದು ಅಲ್ಲಿನ ಪ್ರಜೆಯ ಮೂಲಭೂತ ಹಕ್ಕಾಗಿದೆ ಎಂದು ಯುಎಸ್ ಸುಪ್ರೀಂ ಕೋರ್ಟ್ ಗುರುವಾರ ತೀರ್ಪು ನೀಡಿದೆ.

ಅಮೆರಿಕದ ಶಾಲಾ-ಕಾಲೇಜುಗಳಲ್ಲಿ ಸಾರ್ವಜನಿಕವಾಗಿ ಗುಂಡಿನ ದಾಳಿ ನಡೆಸುತ್ತಿರುವ ಪ್ರಕರಣಗಳು ವರದಿಯಾಗುತ್ತಲೇ ಇವೆ. ಇಂತಹ ಸನ್ನಿವೇಶದಲ್ಲೇ ಸುಪ್ರೀಂ ಈ ತೀರ್ಪನ್ನು ಪ್ರಕಟಿಸಿದೆ. ವ್ಯಕ್ತಿ ಕಾನೂನುಬದ್ಧ ಸ್ವರಕ್ಷಣೆ ಅಗತ್ಯವಿದೆ ಎಂದು ಸಾಬೀತುಪಡಿಸಲು ಬಂದೂಕು ಪರವಾನಗಿಯನ್ನು ಪಡೆಯಬಹುದು. ಬಂದೂಕುಗಳನ್ನು ಹೊಂದಿರುವ ಜನರನ್ನು ನಿರ್ಬಂಧಿಸುವ ರಾಜ್ಯಗಳ ಕಾನೂನುಗಳಿಗೂ ಈ ತೀರ್ಪು ಬ್ರೇಕ್ ನೀಡಿದೆ.

ಮೇ ತಿಂಗಳಲ್ಲಿ ಎರಡು ಸಾಮೂಹಿಕ ಗುಂಡಿನ ದಾಳಿಯ ನಂತರ ಬಂದೂಕುಗಳಿಗೆ ಕಡಿವಾಣ ಹಾಕುವಂತೆ ಒತ್ತಾಯಗಳು ಕೇಳಿಬರುತ್ತಿವೆ. ಈ ಸಂದರ್ಭದಲ್ಲಿ ನ್ಯಾಯಾಲಯ, US ಸಂವಿಧಾನವು ಬಂದೂಕುಗಳನ್ನು ಹೊಂದುವ ಮತ್ತು ಸಾರ್ವಜನಿಕವಾಗಿ ಜೊತೆಯಲ್ಲಿ ಒಯ್ಯುವ ಹಕ್ಕನ್ನು ಖಾತರಿಪಡಿಸುತ್ತದೆ ಎಂದು ವಾದಿಸಿದ ವಕೀಲರ ಪರವಾಗಿ ತೀರ್ಪು ನೀಡಿದೆ.

ನ್ಯೂಯಾರ್ಕ್ ಕಾನೂನು ಏನು ಹೇಳುತ್ತೆ?

ಯಾವುದೇ ವ್ಯಕ್ತಿ ಸಾರ್ವಜನಿಕವಾಗಿ ಬಂದೂಕು ಒಯ್ಯುವುದಾದರೆ, ಆತ್ಮರಕ್ಷಣೆಗಾಗಿ ಎಂಬುದನ್ನು ಸಾಬೀತುಪಡಿಸಬೇಕು ಎಂದು ನ್ಯೂಯಾರ್ಕ್ ಕಾನೂನು ಹೇಳುತ್ತದೆ.

Edited By : Nirmala Aralikatti
PublicNext

PublicNext

24/06/2022 08:36 am

Cinque Terre

67.67 K

Cinque Terre

1

ಸಂಬಂಧಿತ ಸುದ್ದಿ