ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಇದು ಸಿನಿಮಾ ಮೀರಿಸೋ ರಿಯಲ್ ಲವ್ ಮ್ಯಾರೇಜ್ ಸ್ಟೋರಿ !

ಕೊಪ್ಪಳ: ಇದೊಂದು ವಿಶೇಷ ಲವ್ ಸ್ಟೋರಿ ಬಿಡಿ. ಇಲ್ಲಿ ಯುವ ಮೇಜರ್. ಯುವತಿನೂ ಮೇಜರ್. ಆದರೆ, ಹುಡುಗಿ ಮುಸ್ಲಿಂ ಯುವಕ ಹಿಂದೂ. ಇವರ ಲವ್ ಸ್ಟೋರಿ ಸುಖಾಂತ್ಯ ಕಂಡುದ್ದು ಮಾತ್ರ ಪೊಲೀಸ್ ಸ್ಟೇಷನ್ ನಲ್ಲಿಯೇ. ಅದಕ್ಕೂ ಮೊದಲು ಇಲ್ಲಿ ಭಾರಿ ಡ್ರಾಮಾನೇ ಆಗಿದೆ.ಬನ್ನಿ, ಹೇಳ್ತಿವಿ.

ಹುಡುಗುನಿಗೆ 22 ವರ್ಷ.ಕನಕರೆಡ್ಡಿ ಅನ್ನೋದು ಹೆಸರು. ಹುಡುಗಿಗೆ 21 ವರ್ಷ. ಹೆಸರು ದಿಲ್ ಶಾದ್ ಬೇಗಂ. ಕನಕಗಿರಿ ಪಟ್ಟಣದ ಹುಡುಗಿ. ಇವರ ಲವ್ ಗೆ 5 ವರ್ಷದ ಇತಿಹಾಸ ಇದೆ. ಅಷ್ಟೆ.

ಇಬ್ಬರೂ ಓಡಿ ಹೋಗಿ ಮದುವೆ ಆಗಿದ್ದಾರೆ. ಮದುವೆ ಆಗಿ ಪೊಲೀಸ್ ರಕ್ಷಣೆ ಕೋರಿ ಬಂದಿದ್ದಾರೆ. ಆಗಲೇ ನೋಡಿ, ಕನಕಗಿರಿ ಪೊಲೀಸ್ ಠಾಣೆ ಎದುರು ಡ್ರಾಮಾ ನಡೆದಿರೋದು.

ಹೌದು. ಹುಡುಗಿ ಮನವಲಿಸಲು ಪೋಷಕರಿಗೆ ಚಾನ್ಸ್ ಮೇಲೆ ಚಾನ್ಸ್ ಸಿಕ್ಕಿದೆ. ಹುಡುಗನ ಕಡೆಯವರೂ ಸುಮ್ಮನೆ ಕುಳಿತಿಲ್ಲ. ಅವರೂ ಟ್ರೈ ಮಾಡಿದ್ದಾರೆ. ಮನವೊಲಿಕೆಯ ಇವರ ಕಿತ್ತಾಟದಲ್ಲಿ ಪೊಲೀಸರು ಸುತ್ತು.

ಕೊನೆಗೆ ಈ ಜೋಡಿಯನ್ನ ಸಾಂತ್ರವನ ಕೇಂದ್ರಕ್ಕೆ ಕಳಿಸಲು ಪೊಲೀಸರು ನಿರ್ಧರಿಸಿಯೇ ಬಿಟ್ಟರು. ಆಗ ಹುಡುಗನ ಕಡೆಯವರು ಸಾಂತ್ರವನ ಕೇಂದ್ರದ ಮುಂಚೇನೆ ಹೋರಾಟ ಮಾಡಿ ಅಡುಗೆ ಮಾಡಿಕೊಂಡು ಊಟವನ್ನೂ ಮಾಡಿದರು.

ಇಷ್ಟೆಲ್ಲ ಆದ್ಮೇಲೆ ಕೊನೆಗೆ ಪೊಲೀಸರು ಈ ಜೋಡಿಯನ್ನ ತಾವರಗೇರ ಪೊಲೀಸ್ ಠಾಣೆಗೆ ಕರೆದುಕೊಂಡು ಹೋದ್ರು. ಅಲ್ಲಿಯೇ ಅಲ್ಲಿಯೇ ಎಲ್ಲವೂ ಹ್ಯಾಪಿ ಎಂಡಿಂಗ್.

Edited By :
PublicNext

PublicNext

16/05/2022 08:09 am

Cinque Terre

43.05 K

Cinque Terre

19

ಸಂಬಂಧಿತ ಸುದ್ದಿ