ಗದಗ : ಗದಗ ಜಿಲ್ಲೆ ಲಕ್ಷ್ಮೇಶ್ವರ ತಾಲೂಕಿನಲ್ಲಿ ಇಂದು ನೂರಾರು ರೈತರು ದಿಢೀರ್‌ನೆ ಟೊಮೆಟೊ ಬೆಲೆ ಕುಸಿತದಿಂದಾಗಿ ರೊಚ್ಚಿಗೆದ್ದು, ಟೊಮೆಟೊಗಳನ್ನ ಬೀದಿಗೆ ಸುರಿದು ಪ್ರತಿಭಟನೆ ಮಾಡಿದರು. ಮಾರುಕಟ್ಟೆಯಲ್ಲಿ ಪ್ರತಿ ಕೆಜಿಗೆ 20 ಬೆಲೆ ಇದೆ, ಆದ್ರೆ ರೈತರ ಬಾಕ್ಸಿಗೆ ಕೇವಲ 30 ರು ಖರೀದಿ ಮಾಡುತ್ತಿದ್ದಾರೆ ಎಂದು ರೈತರು ಆರೋಪಿಸಿದ್ದಾರೆ.
ಜಮೀನಿನಿಂದ ಟೊಮೆಟೊ ಹಣ್ಣನ್ನು ಬಿಡಿಸಿಕೊಂಡು ಬರಲು ಕೂಲಿ ಕಾರ್ಮಿಕರಿಗೆ 250 ರಿಂದ 300 ರೂ ನೀಡಬೇಕಾಗಿದೆ. ಅಲ್ಲದೇ ಅತಿವೃಷ್ಟಿಯಿಂದಾಗಿ ಮೊದಲೇ ಬೆಳೆ ಹಾನಿಗಿಡಾಗಿದ್ದು, ರೈತರು ಪರದಾಡುವಂತಾಗಿದೆ. ಅದಕ್ಕಾಗಿ ರೈತರಿಗೆ ಬೆಂಬಲ ಬೆಲೆ ನಿಗದಿಪಡಿಸಿ ಖರೀದಿ ಮಾಡುವಂತೆ ಕೂಡಲೇ ರೈತರಿಗೆ ನೆರವಾಗಲು ಟೊಮೆಟೊ ಖರೀದಿ ಕೇಂದ್ರವನ್ನು ಆರಂಭಿಸಬೇಕು ಎಂದು ರೈತರು ಒತ್ತಾಯಿಸಿದ್ದಾರೆ.
ಈ ವೇಳೆ ಮಾತನಾಡಿದ ಪಕ್ಷಾತೀತ ರೈತ ಪರ ಹೋರಾಟ ವೇದಿಕೆಯ ಅಧ್ಯಕ್ಷ ಮಹೇಶ್ ಸೊಪ್ಪಿನವರು, ಸರ್ಕಾರವು ಉತ್ತರ ಕರ್ನಾಟಕ ರೈತರ ಬೇಡಿಕೆಗಳನ್ನು ನಿರ್ಲಕ್ಷಿಸಿಸುತ್ತಿದೆ ಎಂದು ಹೇಳಿದರು. ಕೂಡಲೇ ಮಧ್ಯಪ್ರವೇಶಿಸಿ ರೈತರ ನೆರವಿಗೆ ಧಾವಿಸದಿದ್ದರೆ ಹೋರಾಟ ಮಾಡುವುದಾಗಿ ಸರ್ಕಾರಕ್ಕೆ ಎಚ್ಚರಿಸಿದ್ದಾರೆ.
PublicNext
04/08/2022 01:17 pm